ರಸ್ತೆ ಅಗಲಿಕರಣದಿಂದ ಹೆಚ್ಚಿದ ಅಪಘಾತ

ಚಿಕ್ಕಬಳ್ಳಾಪುರ: ಗೌರಿಬಿದನೂರು ಪಟ್ಟಣದ ಎಂ.ಸಿ.ಮಾರುಕಟ್ಟೆ ಬಳಿ ಕ್ಯಾಂಟರ್ ಒಂದು ಮೊಪೆಡ್ ಸವಾರನಿಗೆ ಡಿಕ್ಕಿ ಹೊಡೆದ ಕಾರಣ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಗೌರಿಬಿದನೂರು ತಾಲೂಕು ಡಿಂಮ್ಮಘಟ್ಟಹಳ್ಳಿ ಗ್ರಾಮದ 42 ವರ್ಷದ ನಿವಾಸಿ ರಂಗಧಾಮಯ್ಯ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಇತ್ತೀಚೆಗೆ ಈ ಮಾರ್ಗದ ರಸ್ತೆಯನ್ನು ಅಗರಲೀಕರಣ ಮಾಡಲಾಗಿದ್ದು, ಬೃಹತ್ ಹಾಗೂ ಭಾರೀ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿವೆ. ಹೀಗಾಗಿ ಅಪಘಾತಗಳು ಹೆಚ್ಚುತ್ತಿವೆ ಅಂತಾ ಸ್ಥಳೀಯರು ಆರೋಪಿಸಿದ್ದು, ಪೊಲೀಸರು ರಸ್ತೆ ತಡೆಗಳನ್ನು ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *