ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದ ಭೀಕರ ಅಪಘಾತದಿಂದಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ದಾವಣಗೆರೆ ನಗರದ ಹೊರವಲಯದಲ್ಲಿ ಈ ಘಟನೆ ನಡೆದಿದೆ.

ಹೊನ್ನಾಳಿಯ ಮಾಜಿ‌ ಶಾಸಕ ಶಾಂತನಗೌಡರ ಸಹೋದರ ಬಸವನಗೌಡ ಎಂಬುವವರ ಮೊಮ್ಮಗ ಸರೋವರ (24) ಹಾಗೂ ಜೈದೀಪ್ (22) ಎಂಬುವವರು ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿಯ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ನಾಲ್ಕು ಸುತ್ತು ಪಲ್ಟಿ ಹೊಡೆದಿದೆ. ಕಾರಿನಲ್ಲಿ ಇರುವವರು ಗುರುತು ಸಿಗಲಾರದಷ್ಟು ವಿಕಾರವಾಗಿದ್ದು, KA-17-Z- 3614 ನಂಬರಿನ ಮಹಿಂದ್ರ ಎಕ್ಸ್​ಯುವಿ ಕಾರು ದಾವಣಗೆರೆ ಜಿಲ್ಲೆಯ ಡಾ.ಪ್ರಕಾಶ್ ಡಿ.ಬಿ.ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಅತಿ ವೇಗದಿಂದ ಕಾರು ಪಲ್ಟಿಯಾದ ಹಿನ್ನಲೆ ಕಾರಿನಲ್ಲಿದ್ದ ಯುವಕನೊಬ್ಬನ ಮೃತ ದೇಹ ಗುರುತು ಹಿಡಿಯಲು ಸಾಧ್ಯವಾಗದಷ್ಟು ವಿಕಾರವಾಗಿದೆ.. ಇನ್ನು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.‌
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv