ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ದಾಳಿ, 55 ಸಾವಿರ ಅಕ್ರಮ ಹಣ ವಶಕ್ಕೆ

ಹುಬ್ಬಳ್ಳಿ: ನಗರದ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆ ಇಲ್ಲದ ₹55 ಸಾವಿರ ಹಣವನ್ನ ವಶಕ್ಕೆ ಪಡೆದಿದ್ದಾರೆ. ವಿದ್ಯಾನಗರದಲ್ಲಿರುವ ಸಬ್​ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ಕಾರಿ ಶುಲ್ಕಕ್ಕಿಂತ ಹೆಚ್ಚು ಹಣ ಪಡೆಯುತ್ತಾರೆ ಎಂಬ ದೂರಿನ ಮೇರೆಗೆ ದಾಳಿ ನಡೆಸಲಾಯಿತು. ಈ ವೇಳೆ ಕಚೇರಿಯ ಸಿಬ್ಬಂದಿ ಹಾಗೂ ಬಾಂಡ್ ರೈಟರ್ ಬಳಿ ದಾಖಲೆಗೂ ಮೀರಿದ ₹55 ಸಾವಿರ ಹಣ ಪತ್ತೆಯಾಗಿದೆ. ಎಸಿಬಿ ಡಿವೈಎಸ್​ಪಿ ವಿಜಯ್ ಕುಮಾರ್ ಬೀಸನಳ್ಳಿ ನೈತೃತ್ವದಲ್ಲಿ ದಾಳಿ ನಡೆದಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv