ಬೆಳ್ಳಂಬೆಳಗ್ಗೆ ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ರೇಡ್​​​​..!

ಚಿತ್ರದುರ್ಗ: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ವಲಯ ಅರಣ್ಯಾಧಿಕಾರಿ ರಾಮಮೂರ್ತಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ರೇಡ್​​​​ ಮಾಡಿದ್ದಾರೆ. ಡಿವೈಎಸ್​ಪಿ ಜಿ. ಮಂಜುನಾಥ್​​ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಅಲ್ಲದೇ ರಾಮಮೂರ್ತಿ ಅವರ ಚಿತ್ರದುರ್ಗದಲ್ಲಿನ ಕೋಟೆ ರಸ್ತೆಯಲ್ಲಿರುವ ಮನೆ ಹಾಗೂ ತರಿಕೇರೆ ತಾಲೂಕಿನ ಭಕ್ತನಕಟ್ಟೆ ಗ್ರಾಮದಲ್ಲಿನ ಮಾವ ಕೆಂಚಪ್ಪ ಅವರ ಮನೆ ಹಾಗೂ ತೋಟದ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv