ಬೆಳ್ಳಂಬೆಳಗ್ಗೆ ಸರ್ಕಾರಿ ಇಂಜಿನಿಯರ್​​ಗಳಿಗೆ ಎಸಿಬಿ ಶಾಕ್

ಬೆಂಗಳೂರು: ಬೆಳ್ಳಂಬೆಳಗ್ಗೆ ನಗರದಲ್ಲಿ ಸರ್ಕಾರಿ ಇಂಜಿನಿಯರ್​ಗಳ ನಿವಾಸದ ಮೇಲೆ ಎಸಿಬಿ ದಾಳಿ ನಡೆದಿದೆ. ಏಕಕಾಲಕ್ಕೆ ಬೆಂಗಳೂರಿನ ಆರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಜಯ್ ನಗರದಲ್ಲಿರುವ ಬಿಡಿಎ AEE ಕೃಷ್ಣಲಾಲ್ ನಿವಾಸ, ಗಾಂಧಿನಗರದ ಬಿಡಿಎ ಕಚೇರಿ ಹಾಗೂ ಮಹದೇವಪುರದ ಬಿಬಿಎಂಪಿ ಕಚೇರಿ ಮೇಲೆ ರೇಡ್​ ಮಾಡಲಾಗಿದೆ. ಬಿಡಿಎ, ಬಿಬಿಎಂಪಿ ನೀಡುವ ಟಿಡಿಆರ್ ಹಕ್ಕು ಪತ್ರದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರೋ ಆರೋಪ ಕೇಳಿಬಂದ ಹಿನ್ನೆಲೆ, ಎಸ್​ಪಿ ಸಂಜೀವ್ ಪಾಟೀಲ್ ಮತ್ತು ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv