ಬೆಳ್ಳಂಬೆಳಗ್ಗೆ ಫೀಲ್ಡ್​ಗೆ ಇಳಿದ ಎಸಿಬಿ, ಐವರು ಅಧಿಕಾರಿಗಳಿಗೆ ಶಾಕ್..!

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಫೀಲ್ಡ್​ಗೆ ಇಳಿದಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಐವರು ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಒಟ್ಟು 17 ಕಡೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆದಿದೆ. ಬೆಂಗಳೂರು, ಚಿಂತಾಮಣಿ, ಹುಣಸೂರು, ಉಡುಪಿ, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಕಾರವಾರ, ಮಂಗಳೂರು ಸೇರಿದಂತೆ ಒಟ್ಟು 17 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಕೋ-ಆಪರೇಟಿವ್ ಬ್ಯೂರೋದ ಅಡಿಷನಲ್ ರಿಜಿಸ್ಟರ್ ಶಶಿಧರ್,  ಬಿಬಿಎಂಪಿಯ ಪ್ಲಾನಿಂಗ್ ಅಡಿಷನಲ್ ಡೈರೆಕ್ಟರ್ ಬಿಸೆಟಪ್ಪ, ದಾವಣಗೆರೆ ಅಗ್ರಿಕಲ್ಚರ್​ನ ಡೆಪ್ಯುಟಿ ಡೈರೆಕ್ಟರ್ ಹಂಸವೇಣಿ, ಗವರ್ನಮೆಂಟ್​​ ಕಾಲೇಜ್​​ ಆಫ್ ಟೀಚರ್​​ ಫೌಂಡೇಷನ್​ ರೀಡರ್ ಮಂಜುನಾಥಯ್ಯ, ಮೂಡಾದ (ಮೈಸೂರು ಅರ್ಬನ್ ಡೆವಲಪ್​​ಮೆಂಟ್ ಅಥಾರಿಟಿ​​) ಜೂನಿಯರ್ ಇಂಜಿನಿಯರ್ ಕೆ.ಮಣಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ.