ಕೃಷಿ‌ ಇಲಾಖೆ ಡಿಡಿ ಹಂಸವೇಣಿ ನಿವಾಸದ ಮೇಲೆ ಎಸಿಬಿ ರೇಡ್​​

ದಾವಣಗೆರೆ: ದಾವಣಗೆರೆಯಲ್ಲೂ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳ್ಳಗ್ಗೆ ದಾಳಿ ನಡೆಸಿದ್ದಾರೆ. ದಾವಣಗೆರೆ ಕೃಷಿ‌ ಇಲಾಖೆ ಡಿಡಿ ಹಂಸವೇಣಿ ಹಾಗೂ ಕಾರವಾರ ತೋಟಗಾರಿಕೆ ಇಲಾಖೆ ಎಡಿ.ಎನ್.ಕುಮಾರ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ. ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ದಾವಣಗೆರೆಯ ಹಂಸವೇಣಿ ಮನೆ ಮತ್ತು ಪತಿ ಎನ್.ಕುಮಾರ್ ಮನೆ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಂಸವೇಣಿ ಹೆಸರಿನಲ್ಲಿ 75/40 ಅಳತೆಯ 3 ಅಂತಸ್ತಿನ ಒಂದು ಮನೆ, ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದಲ್ಲಿ 15 ಎಕರೆ ಜಮೀನು, 1 ಜೈಲೋ ಕಾರು, 5 ದ್ವಿಚಕ್ರ ವಾಹನ, 1 ಟ್ರ್ಯಾಕ್ಟರ್ ಅಪಾರ ಪ್ರಮಾಣದ ಬೆಳ್ಳಿ, ಬಂಗಾರ ಪತ್ತೆಯಾಗಿದೆ. ದಾವಣಗೆರೆ ನಗರದ ಹಂಸವೇಣಿ ತಂದೆ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv