ಎಸಿಬಿ ಬಲೆಗೆ ಬಿದ್ದ ಜೆಸ್ಕಾಂ ಇಂಜಿನಿಯರ್​

ಕೊಪ್ಪಳ: ಲಂಚ ಪಡೆಯುವಾಗ ಜೆಸ್ಕಾಂನ ಇಂಜಿನಿಯರ್ ಒಬ್ಬರು, ಎಸಿಬಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಜೆಸ್ಕಾಂನ ಇಂಜಿನಿಯರ್ ಪವನ್ ಕುಮಾರ್, ಟ್ರಾನ್ಸ್​ಫಾರ್ಮರ್ ಅಳವಡಿಸಿಕೊಡಲು 20 ಸಾವಿರ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. ಹಿರೇಬನ್ನಿಗೋಳ ಗ್ರಾಮದ ರಮೇಶ್ ಬಳಿ ಗಂಗಾವತಿಯ ಸಿಬಿಎಸ್​ ಸರ್ಕಲ್​ನಲ್ಲಿ 10 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಇಂಜಿನಿಯರ್ ಪವನ್​ನನ್ನ ಬಂಧಿಸಿರುವ ಎಸಿಬಿ ಅಧಿಕಾರಿಗಳು, ವಿಚಾರಣೆ ಮುಂದುವರಿಸಿದ್ದಾರೆ. ಎಸಿಬಿ ಸಿಪಿಐ ಆರ್.ಎಸ್. ಉಜ್ಜನಿಕೊಪ್ಪ, ಎಸ್​.ಎಸ್. ಬಿಳಿಗಿ, ವಿ.ಡಿ. ಹಿರೇಮಠ್ ನೇತೃತ್ವದ ತಂಡ ದಾಳಿ ನಡೆಸಿ ಇಂಜಿನಿಯರ್ ಸಾಹೇಬ್ರನ್ನ ಬಲೆಗೆ ಕೆಡವಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv