ಭಾಷೆಗಳ ಸಾಗರ ಭಾರತ, ನಮ್ಮದೇಶದಲ್ಲಿವೆ ಬರೋಬ್ಬರಿ 19,500 ಭಾಷೆ..!

ನವದೆಹಲಿ: ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದಾದ ಪ್ರಪಂಚದ ಏಕೈಕ ದೇಶ ಎಂದರೆ ಅದು ಭಾರತ. ಇನ್ನು ಭಾರತ ವೈವಿಧ್ಯಮಯ ಭಾಷೆಗಳ ರಾಷ್ಟ್ರವೂ ಹೌದು. ಭಾರತದಲ್ಲಿ ಪ್ರಾಂತ್ಯಾವಾರು ಭಾಷೆಗಳು ಬದಲಾಗುತ್ತಾ ಹೋಗುತ್ತವೆ. ದಕ್ಷಿಣ ಭಾರತದ ಭಾಷೆಗಳಲ್ಲಿ ಸಾಮ್ಯತೆ ಹೆಚ್ಚಿದ್ದು ಇವುಗಳು ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡಿರುವ ಪುರಾವೆಗಳಿವೆ. ಅಂತೆಯೇ ಉತ್ತರ ಭಾರತದ ಭಾಷಗಳಿಗೆ ಸಂಸ್ಕೃತವೇ ಮೂಲ ಭಾಷೆಯಾಗಿದೆ.

ಇತ್ತೀಚಿಗೆ ನಡೆದ ಗಣತಿಯೊಂದರ ಪ್ರಕಾರ​ ಭಾರತದಲ್ಲಿ ಬರೋಬ್ಬರಿ 19,500 ಭಾಷೆ ಮತ್ತು ಉಪಭಾಷೆಗಳಿವೆ. 2011ರ ಸೆನ್ಸಸ್​ ನೊಡುವುದಾದರೆ ಭಾರತದಲ್ಲಿ 19,569 ಭಾಷೆಗಳಿದ್ದವು. ಭಾರತದಲ್ಲಿ ಇಷ್ಟು ಭಾಷೆಗಳಿದ್ದರೂ ಸಂವಿಧಾನದ ಪ್ರಕಾರ 22 ಭಾಷೆಗಳನ್ನು ಮಾತ್ರ ಆಫಿಷಿಯಲ್ ಭಾಷೆಯನ್ನಾಗಿ ಉಪಯೋಗಿಸಲಾಗುತ್ತಿದೆ. ಯಾಕಂದ್ರೆ, ಅಷ್ಟೂ ಭಾಷೆಗಳನ್ನು ವಿಭಾಗಿಸಿ, ವರ್ಗೀಕರಿಸಿದಾಗ ಭಾಷೆ ಬಳಕೆದಾರರ ಸಂಖ್ಯೆ, ಲಿಪಿ ಮುಖ್ಯವಾಗುತ್ತೆ.
ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮೀಷನರ್ ಹೇಳುವ ಪ್ರಕಾರ, ನಮ್ಮ ದೇಶದ ಜನಸಂಖ್ಯೆಯ ಶೇ 96.71% ಜನ ನಿಗದಿತ 121 ಭಾಷೆಗಳನ್ನು ಮಾತೃಭಾಷೆಯಾಗಿ ಉಪಯೋಗಿಸುತಿದ್ದರೆ, 3.29 % ಜನ ಇತರೆ ಭಾಷೆಗಳನ್ನು ಬಳಸುತ್ತಿದ್ದಾರೆ.

121 ಭಾಷೆಗಳನ್ನು ಸಂಪೂರ್ಣ ಭಾಷಾ ಪರಿಶೀಲನೆ, ಸಂಪಾದನೆ ಮತ್ತು ತರ್ಕಬದ್ಧತೆಗೆ ಒಳಪಡಿಸಿ 22 ಭಾಷೆ ಹಾಗೂ 99 ಉಪ ಭಾಷೆಗಳನ್ನಾಗಿ ವರ್ಗೀಕರಿಸಲಾಗಿದೆ. (99 ಭಾಷೆಗಳನ್ನು ಉಪಯೋಗಿಸುವಸರ ಸಂಖ್ಯೆ 10,000ಕ್ಕೂ ಕಡಿಮೆ). ಸಂವಿಧಾನದ ಎಂಟನೆಯ ಶೆಡ್ಯೂಲ್​​​ ಪ್ರಕಾರ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಓರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂತಾಲಿ, ಮೈಥಿಲಿ ಮತ್ತು ಡೋಗ್ರಿ ಸೇರಿದಂತೆ ಒಟ್ಟು 22 ಭಾಷೆಗಳು ಬಳಕೆಯಾಗುತ್ತಿವೆ. ಮೊದಲು ಸಂವಿಧಾನದಲ್ಲಿ 14 ಅನ್ನು ಸೇರಿಸಲಾಗಿತ್ತು. 1967 ರಲ್ಲಿ ಸಿಂಧಿ ಭಾಷೆ, 1992ರಲ್ಲಿ ಕೊಂಕಣಿ, ಮಣಿಪುರಿ ಮತ್ತು ನೇಪಾಳಿ ಭಾಷೆಗಳನ್ನು ಸೇರಿಸಲಾಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv