ಅಮ್ಮನ ಮುಖದಲ್ಲಿ ನೋವಿನ ಛಾಯೆ ಕಾಣ್ತಿಲ್ಲ ಎಂದ ಸಿಎಂಗೆ ಅಭಿಷೇಕ್ ತಿರುಗೇಟು

ಮಂಡ್ಯ: ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್​ ಶಾಸಕರೇ ಇದ್ದಾರೆ. ಅದಲ್ಲದೇ ಮೂರು ಮಂತ್ರಿಗಳಿದ್ದಾರೆ. ಅವರ ಸಾಧನೆಯನ್ನೇ ಇಟ್ಕೊಂಡು ವೋಟ್​ ಕೇಳಿ. ನಿಮ್ಮವರ ಸಾಧನೆ ಬಗ್ಗೆ ಮಾತನಾಡಿ, ನನ್ನ ತಂದೆ ಬಗ್ಗೆ ಮಾತನಾಡಬೇಡಿ ಅಂತಾ ಜೆಡಿಎಸ್​ ಮುಖಂಡರಿಗೆ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.

ಮಂಡ್ಯದಲ್ಲಿ ಅಮ್ಮನ ಪರ ಪ್ರಚಾರ ನಡೆಸಿ ಮಾತನಾಡಿದ ಅಭಿಷೇಕ್ ಅಂಬರೀಶ್, ನೋಡ್ರಪ್ಪ ನಾನಂತೂ ಇಲ್ಲಿದ್ದೀನಿ. ಬೇರೆಯವ್ರ ಬಗ್ಗೆ ನನಗಂತೂ ಗೊತ್ತಿಲ್ಲ. ಕಳೆದ 20 ದಿನಗಳಿಂದ ನಿಮ್ಮಗಳ ಮಧ್ಯೆ ಓಡಾಡುತ್ತ ಆಶಿರ್ವಾದ ಪಡೆಯುತ್ತಿದ್ದೇವೆ ಅನ್ನೋದು ಸತ್ಯ. ವಿರೋಧ ಪಕ್ಷಗಳು ಪ್ರತಿದಿನ ನಮ್ಮ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಒಂದು ಮಾತಿನ ಬಗ್ಗೆ ಉತ್ತರ ಕೊಡಬೇಕು ಅನಿಸುತ್ತಿದೆ. ನಾನು ವಯಸ್ಸಿನಲ್ಲಿ ಚಿಕ್ಕವನು. ಆದ್ರೆ ತಾಯಿ ಬಗ್ಗೆ, ತಂದೆ ಬಗ್ಗೆ ಯಾರದ್ರೂ ಮಾತನಾಡಿದ್ರೆ ಸುಮ್ಮನಿರಲು ಸಾಧ್ಯವಿಲ್ಲ ಅಂತಾ ಹೇಳಿದರು.

ಅಂಬರೀಶ್​ ಅವ್ರ ಪಾರ್ಥಿವ ಶರೀರವನ್ನ ಮಂಡ್ಯಕ್ಕೆ ತೆಗೆದುಕೊಂಡು ಹೋಗಿದ್ದೇ ನಾನು ಅನ್ನೋ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿ, ನವೆಂಬರ್ 24 ರಾತ್ರಿ ವಿಕ್ರಂ ಆಸ್ಪತ್ರೆಯಲ್ಲಿ ನಾನಿದ್ದೆ. ಅಂಬರೀಶ್ ಅವರ ಪಾರ್ಥಿವ ಶರೀರವನ್ನ ಮಂಡ್ಯಕ್ಕೆ ತೆಗೆದುಕೊಂಡು ಹೋಗಿಲ್ಲ ಅಂದ್ರೆ ಕಷ್ಟ ಅಂತಾ ಸಿಎಂ ಕುಮಾರಸ್ವಾಮಿಗೆ ಹೇಳಿದ್ದೆ. ಇದು ನನ್ನಪ್ಪ ಅಂಬರೀಶ್ ಮೇಲೆ ಆಣೆಗೂ ಸತ್ಯ. ಆದ್ರೆ ಸಿಎಂ ಕುಮಾರಸ್ವಾಮಿ ಆಗಲ್ಲ ಸೆಕ್ಯೂರಿಟಿ ಪ್ರಾಬ್ಲಂ ಆಗುತ್ತೆ ಅಂದ್ರು. ಮರುದಿನ ಅಪ್ಪನ ಪಾರ್ಥಿವ ಶರೀರದ ಮುಂದೆ ನಿಂತಾಗ ಸಿಎಂ ಕುಮಾರಸ್ವಾಮಿ ಬಂದು ನನ್ನ ಕಿವಿಯಲ್ಲಿ ಹೇಳಿದ್ರು. ಏನಂದ್ರೆ ಇಲ್ಲ, ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಆಗಲ್ಲ. ಕಷ್ಟ ಆಗುತ್ತೆ ಅಂತಾ ಹೇಳುತ್ತಾರೆ. ಇದೇ ವೇಳೆ ಸಿಎಂ ಕುಮಾರಸ್ವಾಮಿಗೆ ಮಂಡ್ಯದ ನಾಗರಿಕರು ಒಬ್ಬರು ಜೋರಾಗಿ ಕೂಗಿ ಹೇಳುತ್ತಾರೆ. ಅದೇನಂದರೆ ಮಂಡ್ಯಕ್ಕೆ ಅವರನ್ನ ತಂದಿಲ್ಲ ಅಂದ್ರೆ ಸರಿ ಇರಲ್ಲ ಅಂತಾ. ನಂತರ ಕುಮಾರಸ್ವಾಮಿ ಪಾರ್ಥಿವ ಶರೀರವನ್ನ ಮಂಡ್ಯಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ರು. ಅಂದು ಪಾರ್ಥಿವ ಶರೀರವನ್ನ ಮಂಡ್ಯಕ್ಕೆ ತಂದಿಲ್ಲ ಅಂದ್ರೆ ಜನ ಸುಮ್ಮಿನಿರುತ್ತಿರಲಿಲ್ಲ ಅಂತಾ ಹೇಳಿದ್ರು.

ಸಿಎಂಗೆ ಟಾಂಗ್​
ಈ ಹಿಂದೆ ಸುಮಲತಾ ಅಂಬರೀಶ್ ಅವ್ರನ್ನ ಟೀಕಿಸಿದ್ದ ಕುಮಾರಸ್ವಾಮಿ, ಸುಮಲತಾರ ಮುಖದಲ್ಲಿ ಯಾವುದೇ ನೋವಿನ ಛಾಯೆ ಕಾಣುತ್ತಿಲ್ಲ ಅಂತಾ ಹೇಳಿದ್ದರು. ಇದಕ್ಕೆ ಇಂದು ಪ್ರತಿಕ್ರಿಯಿಸಿದ ಅಭಿಷೇಕ್, ಸಾವಿನ ನೋವು ಆ ಅಮ್ಮನ ಮುಖದಲ್ಲಿ ಕಾಣುತ್ತಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ನಾನು ಹೇಳಿದೆ, ಆ ನೋವನ್ನ ತೋರಿಸೋದು ನಮಗೆ ಗೊತ್ತಿಲ್ಲ ಅಂತಾ ಹೇಳಿದೆ ಅಂದ್ರು.

ಇದನ್ನೂ ಓದಿ:ಸುಮಲತಾರ ಮುಖದಲ್ಲಿ ಯಾವುದೇ ನೋವಿನ ಛಾಯೆ ಕಾಣುತ್ತಿಲ್ಲ -ಕುಮಾರಸ್ವಾಮಿ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv