ಆರ್​ಸಿಬಿ ಸೋಲಿಗೆ ಕಾರಣ ಹೇಳ್ತಾರೆ ಕೇಳಿ ಎಬಿ ಡಿವಿಲಿಯರ್ಸ್​..!

2019ರ ಐಪಿಎಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಹಿಯಾಗಿದೆ. ಟೂರ್ನಿಯಲ್ಲಿ ಆಡಿರೋ ಎಲ್ಲಾ ಪಂದ್ಯಗಳನ್ನ ಸೋತಿರುವ ಆರ್ ಸಿಬಿ, ಪ್ಲೇ ಆಫ್ ಪ್ರವೇಶಿಸಲು ಪವಾಡವೇ ನಡೆಸಬೇಕಿದೆ. ಆರ್ ಸಿಬಿಯ ಕಳಪೆ ಪ್ರದರ್ಶನಕ್ಕೆ ನಾಯಕ ವಿರಾಟ್ ಕೊಹ್ಲಿ, ಪ್ರತಿ ಬಾರಿಯೂ ಒಂದಲ್ಲ ಒಂದು ಕಾರಣ ನೀಡುತ್ತಲೇ ಬಂದಿದ್ದಾರೆ. ಆದ್ರೆ ಆರ್ ಸಿಬಿ ಸೋಲಿಗೆ ಅಸಲಿ ಕಾರಣ, ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್ ರಿವೀಲ್ ಮಾಡಿದ್ದಾರೆ. ಹೌದು..! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಪ್ರಮುಖ ಕಾರಣ, ಫೀಲ್ಡಿಂಗ್ ಅನ್ನೋದು ಡಿವಿಲಿಯರ್ಸ್ ಅಭಿಪ್ರಾಯವಾಗಿದೆ. ಡಿವಿಲಿಯರ್ಸ್ ಪ್ರಕಾರ, ” ತಂಡದಲ್ಲಿರೋ ಪ್ರತಿಯೊಬ್ಬ ಆಟಗಾರನೂ ಬ್ಯಾಟ್ಸ್ ಮನ್ ಅಥವಾ ಬೌಲರ್ ಆಗಿರುತ್ತಾನೆ. ಹಾಗಾಗಿ ಬ್ಯಾಟ್ಸ್ ಮನ್ ಗಳು ಬ್ಯಾಟಿಂಗ್ ನತ್ತ ಗಮನ ಹರಿಸಿದ್ರೆ, ಬೌಲರ್ ಗಳು ಬೌಲಿನತ್ತ ಚಿತ್ತ ಹರಿಸ್ತಾರೆ. ಆದ್ರೆ ಪ್ರತಿಯೊಬ್ಬ ಆಟಗಾರನೂ ಫೀಲ್ಡರ್ ಅನ್ನೋದನ್ನ ಮರೆಯಬಾರದು. ಆದ್ರೆ ನಾವು ಮೈದಾನದಲ್ಲಿ ಸ್ಟ್ರಾಂಗ್ ಫೀಲ್ಡಿಂಗ್ ಮಾಡುವಲ್ಲಿ ವಿಫಲರಾಗಿದ್ದೇವೆ ” ಅಂತ ಡಿವಿಲಿಯರ್ಸ್ ತಂಡದ ಸೋಲಿಗೆ ಕಾರಣ ತಿಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv