ಧೋನಿ ನೋಡಿ ಅಳೋಕೆ ಶುರು ಮಾಡಿದ ಮಗು..!

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್, ಗ್ರೇಟ್​ ಫಿನಿಶರ್​, ಧೋನಿ ಆನ್​ಫೀಲ್ಡ್​ನಲ್ಲಿ ಮಾತ್ರ ಅಲ್ಲ. ಆಫ್​ದಿ ಫೀಲ್ಡ್​​ನಲ್ಲೂ ಸಖತ್ ಕೂಲ್ ಆಗಿ ಇರ್ತಾರೆ. ತಾನೊಬ್ಬ ದೊಡ್ಡ ಸೆಲೆಬ್ರೆಟಿ ಅನ್ನೋ ಅಹಂ ಇಲ್ಲದೇ ಸಾಮಾನ್ಯ ಜನರೊಂದಿಗೆ ಬೆರೆಯುತ್ತಾರೆ. ಸದ್ಯ ನ್ಯೂಜಿಲೆಂಡ್ ಪ್ರವಾಸ ಮುಗಿಸಿ ಭಾರತಕ್ಕೆ ತವರಿಗೆ ಮರಳಿರುವ ಧೋನಿ, ರಿಲ್ಯಾಕ್ಸ್ ಮೂಡ್​ನಲ್ಲಿದ್ದು, ಮುಂಬೈನಲ್ಲಿ ಫುಟ್ಬಾಲ್ ಚಾರಿಟಿ ಪಂದ್ಯ ಆಡಿದ್ದಾರೆ. ಪಂದ್ಯದ ನಂತರ ತಮ್ಮ ಜೊತೆ ಆಡಿದ ಆಟಗಾರರ ಮನೆಯವರನ್ನ ಧೋನಿ ಭೇಟಿ ಮಾಡಿದ್ರು. ಆದ್ರೆ ಈ ವೇಳೆ ಧೋನಿ ಬರ್ತೀಯಾ ಎಂದು ಚಿಕ್ಕ ಮಗುವನ್ನ ಎತ್ತಿಕೊಳ್ಳಲು ಮುಂದಾದ್ರು. ಆದ್ರೆ ಧೋನಿಯನ್ನ ನೋಡುತ್ತಿದ್ದಂತೆ  ಆ ಮಗು ಗಳಗಳನೇ ಅಳೋಕೆ ಶುರುಮಾಡ್ತು. ಇದರಿಂದ ಧೋನಿ ಯಾಕೆ ಬೇಕಪ್ಪಾ ಇದರ ಸಹವಾಸ ಅಂತಾ ನಗುತ್ತಾ ತೆರಳಿದ್ರು. ಸದ್ಯ ಈ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.