ಒಂದೆಡೆ ಯದುವೀರ್ ದರ್ಬಾರ್, ಇನ್ನೊಂದೆಡೆ ಪುಟಾಣಿ ಆದ್ಯವೀರ್ ಮಿಂಚಿಂಗ್..!

ಮೈಸೂರು: ಇಂದಿನಿಂದ ನಾಡಹಬ್ಬ ದಸರಾಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿಯವರು ಈ ಬಾರಿಯ ದಸರಾ ಹಬ್ಬವನ್ನು ಉದ್ಘಾಟಿಸಿದರು. ದಸರಾದ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಹಾಗೂ ಖಾಸಗಿ ದರ್ಬಾರ್ ಅರಮನೆಯಲ್ಲಿ ನಡೆದವು.

ಪ್ರಜಾಪ್ರಭುತ್ವದ ನಡುವೆಯೂ ರಾಜಾಳ್ವಿಕೆಯ ಸಂಕೇತವಾಗಿ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಖಾಸಗಿ ದರ್ಬಾರ್​ನಲ್ಲಿ ರಾಜ ಯದುವೀರ್​​ ಕೃಷ್ಣದತ್ತ ಚಾಮರಾಜ ಒಡೆಯರ್, ದರ್ಬಾರ್ ಹಾಲ್​​ನಲ್ಲಿ ಬೆಳ್ಳಿ ಕುರ್ಚಿಯ ಮೇಲೆ ಕುಳಿತು ಕಳಶಗಳಿಗೆ ಪೂಜೆ ನೆರವೇರಿಸಿದರು. ಒಂದೆಡೆ ರಾಜ ಯದುವೀರ್ ತಿಳಿ ನೀಲಿ ಬಣ್ಣದ ಸಾಂಪ್ರದಾಯಿಕ ಮೈಸೂರು ಪೇಟ, ಗುಲಾಬಿ ವರ್ಣದ ನಿಲುವಂಗಿ ಹಾಗೂ ಪೈಜಾಮಾ ಧರಿಸಿ ರಾಜಪೋಷಾಕಿನಲ್ಲಿ ಕಂಗೊಳಿಸಿದ್ರು. ಮತ್ತೊಂದೆಡೆ ಯದುವಂಶದ ಕುಡಿ ಆದ್ಯವೀರ ಒಡೆಯರ್​ ಕೂಡಾ ಕಾಲಿಗೆ ಚಿಕ್ಕದಾದ ಕಡಗ, ತಿಳಿ ಗುಲಾಬಿ ಬಣ್ಣದ ಬಟ್ಟೆ ತೊಟ್ಟು ಕಂಗೊಳಿಸಿದರು.

ಪೂಜಾಕೈಂಕರ್ಯದಲ್ಲಿ ತಾಯಿ ಜೊತೆ ಆದ್ಯವೀರ ಕುಡಾ ಭಾಗಿಯಾಗಿದ್ದರು. ಪೂಜಾ ಕಾರ್ಯಗಳ ಬಳಿಕ ರಾಣಿ ಪ್ರಮೋದಾದೇವಿ ಒಡೆಯರ್ ಕೆಲಕಾಲ ಮೊಮ್ಮಗ ಆದ್ಯವೀರನನ್ನು ಎತ್ತಿಕೊಂಡು ಮುದ್ದಾಡಿ, ಕ್ಯಾಮೆರಾಗೆ ಪೋಸ್ ಕೊಟ್ಟರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv