ಯುವಕನಿಗೆ ಚಾಕು ಇರಿದು ದರೋಡೆ ಮಾಡಿದ ದುಷ್ಕರ್ಮಿಗಳು.!

ಹುಬ್ಬಳ್ಳಿ :ವಾಣಿಜ್ಯನಗರಿಯಲ್ಲಿ ಯುವಕನೋರ್ವನಿಗೆ ಚಾಕು ಇರಿದು ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆ ಅಕ್ಷಯ್ ಪಾರ್ಕ್ ಬಳಿ ನಡೆದಿದೆ. ಹಲ್ಲೆ ಬಳಿಕ ಮೊಬೈಲ್ ಹಾಗೂ 40000 ರೂಪಾಯಿ ನಗದು ಕಸಿದುಕೊಂಡು ಮೂರು ಜನ ಆಗಂತುಕರು ಪರಾರಿಯಾಗಿದ್ದಾರೆ. ಇದಲ್ಲದೆ, ಹಲ್ಲೆಗೊಳಗಾದ ಬಸವರಾಜ್ ತಂಗಿಯ ಕೊರಳಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ದುಷ್ಕರ್ಮಿಗಳು ದೋಚಿದ್ದಾರೆ.

ಬಸವರಾಜ ಕಲಗೇರಿ (24) ಕಲಘಟಗಿ ತಾಲೂಕಿನ ಬಿಸರಳ್ಳಿ ಗ್ರಾಮದ ಯುವಕನೇ ಚಾಕು ಇರಿತಕ್ಕೊಳಗಾಗಿದ್ದಾನೆ. ಬಸವರಾಜ್ ಬೈಕ್​ನಲ್ಲಿ ಸಹೋದರಿಯೊಂದಿಗೆ ಹುಬ್ಬಳ್ಳಿಯಿಂದ ಬಿಸರಳ್ಳಿಗೆ ಹೋಗುತ್ತಿದ್ದ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಬಸವಾರಜ್​ನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಗೋಕುಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv