ಶಂಕಿತ ಕಾಯಿಲೆಗೆ ಚಿಕಿತ್ಸೆ ಫಲಿಸದೇ ಮತ್ತೊಂದು ಸಾವು

ಶಿವಮೊಗ್ಗ: ಶಂಕಿತ ಮಂಗನಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಸಾಗರ ತಾಲೂಕಿನ ವಾಟೆಮಕ್ಕಿ ಗ್ರಾಮದ ಸವಿತಾ ನಾರಾಯಣ್​​​​​​​​​ ಎಂಬುವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹಲವು ದಿನಗಳಿಂದ ಮಣಿಪಾಲ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವಿತಾ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.