ಭೀಕರ ಅಪಘಾತ, ಇಬ್ಬರ ದುರ್ಮರಣ, ಪವಾಡ ರೀತಿಯಲ್ಲಿ ಬಾಲಕ ಪಾರು

ರಾಯಚೂರು: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸಾವನಪ್ಪಿರುವ ಘಟನೆ ರಾಯಚೂರು ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ.

ಬೈಕ್ ಸವಾರ 26 ವರ್ಷದ ಗೌರಿಶಂಕರ ಸ್ಥಳದಲ್ಲಿಯೇ ಮೃತಪಟ್ಟಿದ್ರೆ, ಬೈಕ್ ಹಿಂದೆ ಕುಳಿತಿದ್ದ 20 ವರ್ಷದ ಕೀರ್ತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೈಕ್​​ನಲ್ಲಿದ್ದ ಬಾಲಕನೋರ್ವ ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದ ದೃಶ್ಯ ವೃತ್ತದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮಾರಾದಲ್ಲಿ ಸೇರೆಯಾಗಿದ್ದು, ಅಪಘಾತದ ದೃಶ್ಯ ನೋಡುಗರನ್ನು ಭಯ ಹುಟ್ಟಿಸುವಂತಿದೆ.

ಹಿಂದಿನಿಂದ ಲಾರಿ ಡಿಕ್ಕಿ ಬೈಕ್ ಗೆ ಹೊಡೆದ ರಭಸಕ್ಕೆ ಬೈಕ್ ಮೇಲಿದ್ದ ಬಾಲಕ ಸೇರಿದಂತೆ ಮೂವರು ಕೆಳಕ್ಕೆ ಬಿದ್ದಾಗ ಸವಾರನ ಮೇಲೆ ಲಾರಿಯ ಚಕ್ರವೊಂದು ಹತ್ತಿದೆ. ಆದ್ರೆ ಬಾಲಕ ಮಾತ್ರ ಯಾವುದೇ ಗಾಯಗಳಾಗದೇ ಪವಾಡ ಸದೃಶ ರೂಪದಲ್ಲಿ ಪಾರಾಗಿದ್ದಾನೆ. ಮೃತ ಗೌರಿ ಶಂಕರನ ಪತ್ನಿ ರೀಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದ ಕಾರಣ ಊಟ ಕೊಟ್ಟು ವಾಪಸ್ ನಾದಿನಿಯ ಜೊತೆಗೆ ಮನೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ.

ಮೃತರು ರಾಯಚೂರು ತಾಲೂಕಿನ ಅಸ್ಕಿಹಾಳ್ ಗ್ರಾಮದ ನಿವಾಸಿ ಆಗಿದ್ದು, ಘಟನೆ ಕುರಿತಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕನನ್ನ ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತ ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv