ಉಪ ಸಭಾಪತಿಯಾದ್ರೆ ಸದನದಲ್ಲಿ ಧ್ವನಿ ಎತ್ತಲು ಆಗಲ್ಲ- ಶಾಸಕ ಎ.ಟಿ. ರಾಮಸ್ವಾಮಿ

ಹಾಸನ: ಉಪ ಸಭಾಪತಿಯಾದ್ರೆ ಪ್ರಮುಖ ವಿಷಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಲು ಆಗುವುದಿಲ್ಲ. ಹಾಗಾಗಿ ‌ಉಪಸಭಾಪತಿ ಹುದ್ದೆ ಒಪ್ಪಿಕೊಳ್ಳುವುದಿಲ್ಲ ಅಂತ ಜೆಡಿಎಸ್​ ಶಾಸಕ ಎ.ಟಿ. ರಾಮಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಅರಕಲಗೂಡಿನಲ್ಲಿ ಮಾತನಾಡಿದ ಅವರು, ಉಪಸಭಾಪತಿ ಹುದ್ದೆ ನೀಡಿದರೆ ಒಪ್ಪುವುದಿಲ್ಲ. ಉಪ ಸಭಾಪತಿಯಾದ್ರೆ ಕೆಲವು ವಿಷಯಗಳ ಬಗ್ಗೆ ಮೌನ ವಹಿಸಬೇಕಾಗುತ್ತದೆ. ಕ್ಷೇತ್ರದ ಜನರೇ ಪ್ರಭುಗಳು, ಅವರ ಆಸ್ಥಾನದಲ್ಲಿ ಮಂತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಸಚಿವ ಸ್ಥಾನಕ್ಕಾಗಿ ನಾನು ಲಾಬಿ ನಡೆಸಿಲ್ಲ, ಮುಂದೆಯೂ ಲಾಬಿ ಮಾಡುವುದಿಲ್ಲ ಎಂದರು. ಸಚಿವ ಸ್ಥಾನದ ಸಂಖ್ಯೆ ಕಡಿಮೆ ಇದೆ. ಪಕ್ಷದ ವರಿಷ್ಠರಿಗೆ ಸರಾಗವಾಗಿ ಸರ್ಕಾರದ ಕೆಲಸ ‌ಮಾಡಲು ಬಿಡಬೇಕು. ಹಿರಿತನದ ಆಧಾರ, ಕ್ಷೇತ್ರವಾರು ಸಚಿವ ಸ್ಥಾನ ಹಂಚಿಕೆಯಾಗಬೇಕಾಗಿದೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವ ಸಾಮರ್ಥ್ಯ ಇದೆ. ಆದರೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲ್ಲ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv