ಉಪ್ಪಿಗೆ ಸ್ವೀಟ್​ ಪಪ್ಪಿ ಕೊಟ್ಟ ಲೇಡಿ ಉಪ್ಪಿ..!!

ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ರಿಯಲ್​ ಸ್ಟಾರ್​ ಉಪೇಂದ್ರ ತುಂಬಾನೇ ಬ್ಯುಸಿಯಾಗಿದ್ರು. ಅಭಿಮಾನಿಗಳ ಜೊತೆಗೆ ಕೇಕ್​ ಕಟ್​​ ಮಾಡ್ತಾ, ಅವ್ರು ತಂದಿದ್ದ ಹೂ ಬೊಕ್ಕೆಗಳನ್ನ ಪಡೆದುಕೊಳ್ತಾ, ಸೆಲ್ಪೀಗೆ ಪೋಸ್​ ಕೊಡ್ತಾ, ಇವತ್ತೆ ಲಾಂಚ್​ ಆದ ಅವ್ರ ಉತ್ತಮ ಪ್ರಜಾಕೀಯ ಪಕ್ಷದ ಬಗ್ಗೆ ಸಾವಿರಾರು ಆಲೋಚನೆಯಲ್ಲಿ ಅಲೆದಾಡ್ತಾ ಇದ್ರು. ಇಷ್ಟೆಲ್ಲಾ ಟೆನ್ಷನ್​​ನಲ್ಲಿದ್ದ ರಿಯಲ್​ ಸ್ಟಾರ್​​​ನ ಕೂಲ್​ ಮಾಡೋಕಂತಾನೆ, ಅವ್ರ ಎಲ್ಲಾ ಆಯಾಸವನ್ನ ದೂರ ಮಾಡೋಕೆ ಅಂತಾನೆ, ಅಭಿಮಾನಿಗಳ ಎದುರೆ ಲೇಡಿ ರಿಯಲ್​ ಸ್ಟಾರ್​​​​ ಕೆನ್ನೆಗೊಂದು ಸಿಹಿ ಮುತ್ತನ್ನ ನೀಡಿದ್ರು. ಆ ಸಿಹಿ ಮುತ್ತು ಎಷ್ಟು ಕಾಸ್ಟ್ಲಿ ಅಂದ್ರೆ, ಸಿಕ್ಕ ತಕ್ಷಣ ಉಪೇಂದ್ರಗಿದ್ದ ಜೋಶ್​ ಡಬಲ್​ ಆಯ್ತು. ಅಭಿಮಾನಿಗಳಿಗೋ ಸರ್​​ಪ್ರೈಸ್​ ಮೇಲೆ ಸರ್​ಪ್ರೈಸ್​ ಸಿಕ್ಕಂತಾಗಿತ್ತು.


ಬರ್ತ್​​​ಡೇ ಗೆ ಪ್ರಿಯಾಂಕ ಉಪೇಂದ್ರ ಕೊಟ್ಟ ಗಿಫ್ಟ್​..!
ಅಭಿಮಾನಿಗಳ ಜೊತೆಗೆ 50 ಕೇಜಿ ಕೇಕ್​ ಕಟ್​ ಮಾಡಿದ ಖುಷಿಯಲ್ಲಿ ಉಪ್ಪಿ ಬೀಗ್ತಾ ಇದ್ರೆ, ಪತ್ನಿ ಕಡೆಯಿಂದ ಸಿಕ್ಕ ಸಿಹಿಮುತ್ತು ಕೇಕ್​ನ ಸಿಹಿಯನ್ನ ನೂರ್ಪಟ್ಟು ಮಾಡಿತ್ತು. ಬರ್ತ್​​ಡೆಗೆ ಬಂದಿದ್ದ ಪತ್ರಕರ್ತರು, ಉಪೇಂದ್ರಗೆ ಪ್ರೀತಿಯ ಮಡದಿ ಏನ್​ ಗಿಫ್ಟ್​ ಕೊಟ್ರು, ಏನ್​ ಗಿಫ್ಟ್​ ಕೊಟ್ರು ಅಂತ ಕೇಳ್ತಾ ಇದ್ರು. ಅದೆಲ್ಲಕ್ಕೂ ಈ ಮುತ್ತಿನ ಮೂಲಕ ಉತ್ತರ ಕೊಟ್ರು ಪ್ರಿಯಾಂಕ. ಈ ಮುತ್ತಿಗೆ ಬೆಲೆ ಕಟ್ಟಲು ಸಾಧ್ಯವೆ. ಉಪೇಂದ್ರ ಹಾಗೂ ಪ್ರಿಯಾಂಕ ನಡುವಣ ರೊಮ್ಯಾನ್ಸ್​​ನ ತೆರೆಮೇಲೆ ನೋಡಿದ್ದ ಅಭಿಮಾನಿಗಳಿಗೆ ರಿಯಲ್ಲಾಗಿ ನೋಡೋ, ಸದಾವಕಾಶ ಬಂದಿದ್ದೇ ಈ ಬಾರಿ ಬರ್ತ್​ಡೇಗೆ ಅಭಿಮಾನಿಗಳಿಗೆ ಸಿಕ್ಕ ಭರ್ಜರಿ ಉಡುಗೊರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv