ಚಿರತೆ ದಾಳಿಗೆ ಕುರಿಗಾಹಿಗೆ ಗಂಭೀರ ಗಾಯ…!

ತುಮಕೂರು: ಕುರಿಗಳನ್ನು ರಕ್ಷಿಸಲು ಹೋದ ಕುರಿಗಾಹಿ ಮೇಲೆ ಚಿರತೆಯೊಂದು ದಾಳಿ ನಡೆಸಿರುವ ಘಟನೆ ಚಿಕ್ಕನಾಯಕನಹಳ್ಳಿಯ ಮೂಡಲು ಗುಡ್ಡದ ಸಮೀಪ ನಡೆದಿದೆ. ಮೂಡಲ ಗುಡ್ಡ ಗ್ರಾಮದ ನಿವಾಸಿ ರಾಜಣ್ಣ, ಕುರಿ ಮೇಯಿಸಲು ತೋಟದ ಬಳಿ ಹೋಗಿದ್ದರು. ಈ ವೇಳೆ ಚಿರತೆಯೊಂದು ಏಕಾಏಕಿ ಕುರಿ ಹಿಂಡಿನ ಮೇಲೆ ದಾಳಿ ನಡೆಸಿ ಕುರಿ ಒಂದನ್ನು ಹೊತ್ತೊಯ್ಯತಿತ್ತು. ಕೂಡಲೇ ರಾಜಣ್ಣ ಚಿರತೆಯನ್ನು ರಕ್ಷಿಸಲು ಹೋಗಿದ್ದಾನೆ. ಆಗ ಚಿರತೆ ರಾಜಣ್ಣನ ಮೇಲೆ ಎರಗಿದೆ. ರಾಜಣ್ಣನ ಕಿರುಚಾಟದ ಸದ್ದು ಕೇಳಿ ತೋಟದಲ್ಲಿ ಕೆಲಸ ಮಾಡ್ತಿದ್ದ ಕೆಲಸಗಾರರು ಆಗಮಿಸಿ ರಾಜಣ್ಣನನ್ನು ರಕ್ಷಿಸಿದ್ದಾರೆ. ಸದ್ಯ ಚಿರತೆ ದಾಳಿಯಿಂದ ರಾಜಣ್ಣನಿಗೆ ಕಿವಿ ಮತ್ತು ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಿದ ಅರಣ್ಯ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv