ಮದುವೆಯಾಗಿದ್ರೂ, ಇನ್ನೊಬ್ಬಳನ್ನು ಕಿಡ್ನಾಪ್​ ಮಾಡಿರುವ ಭೂಪ..!

ಯಾದಗಿರಿ: ನಗರದಲ್ಲಿ ಯುವತಿಯೊಬ್ಬಳು ಬರ್ಹಿದೆಸೆಗೆ ತೆರಳಿದ ವೇಳೆ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗ್ತಿದೆ. ನಗರದ ಗಂಜ್ ಬಳಿಯ ಬುಡ್ಕಜಂಗಮ ಕಾಲೋ‌ನಿಯಲ್ಲಿ ಈ ಘಟನೆ ನಡೆದಿದೆ. ಯುವತಿ ಸುಜಾತ (25) ಇದೇ ದಿನಾಂಕ 10ರಂದು ಬೆಳಿಗ್ಗೆ 6 ಗಂಟೆಗೆ ಬರ್ಹಿದೆಸೆಗೆ ಹೋಗಿದ್ದರು. ಈ ವೇಳೆ ಹೊಂಚುಹಾಕಿದ ಕಿಡಿಗೇಡಿಗಳ ತಂಡ ಯುವತಿಯ‌ನ್ನು ಬಲವಂತವಾಗಿ ಬೈಕ್ ಮೇಲೆ ಹತ್ತಿಸಿಕೊಂಡು ಪರಾರಿಯಾಗಿದ್ದಾರೆ. ಬುಡ್ಕಗಜಂಗಮ ಕಾಲೋನಿಯ ಬಾಬು (26) ಎನ್ನುವ ಯುವಕ ಹಾಗೂ ಆತನ ನಾಲ್ಕು ಸ್ನೇಹಿತರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಇದೇ ಆರೋಪಿ ಬಾಬು ನನ್ನ ಮಗಳನ್ನು ಕಿಡ್ನಾಪ್ ಮಾಡಿ ಮದುವೆ ಮಾಡಿಕೊಳ್ಳಲು ಯತ್ನಿಸಿದ್ದ. ಆ ವೇಳೆ ಪೊಲೀಸರಿಗೆ ದೂರು ನೀಡಿದ್ದರಿಂದ ಹೆದರಿ ನಮ್ಮ ಮಗಳನ್ನು ವಾಪಸ್ಸು ತಂದು ಬಿಟ್ಟಿದ್ದ. ಈಗ ಮತ್ತೊಮ್ಮೆ ಸುಜಾತಳನ್ನು ಕಿಡ್ನಾಪ್ ಮಾಡಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿ, ಮಗ‍ಳನ್ನು ತಮಗೆ ಒಪ್ಪಿಸುವಂತೆ ಬಾಲಕಿಯ ಪೋಷಕರು ಒತ್ತಾಯಿಸಿದ್ದಾರೆ. ಈಗಾಗಲೇ ಕಿಡ್ನಾಪ್ ಮಾಡಿದ ಆರೋಪಿ ಬಾಬುಗೆ ಮದುವೆ ಆಗಿ ಎರಡು ಮಕ್ಕಳಿದ್ದರೂ, ಮತ್ತೊಂದು  ಹುಡುಗಿಯ ಮೇಲೆ ಕಣ್ಣು ಹಾಕಿ, ಕಿಡ್ನಾಪ್ ಮಾಡಿ ಪರಾರಿಯಾಗಿದ್ದಾನೆ. ಅಲ್ಲದೆ ಆರೋಪಿ ಮೇಲೆ ಪೊಲೀಸ್ ಠಾಣೆಯಲ್ಲಿ ಹಲವು ಕೇಸ್​ಗಳಿವೆ. ಯಾವುದೋ ಹಳೆ ದ್ವೇಷಕ್ಕೆ ತನ್ನ ಮಗಳ ತಲೆ ಕೆಡಿಸಿ ಕಿಡ್ನಾಪ್ ಮಾಡಿದ್ದಾನೆ ಅಂತಾ ಪೋಷಕರು ಆಪಾದಿಸಿದ್ದಾರೆ. ಮಗಳ ನಾಪತ್ತೆಯಿಂದ ಮನೆಯವರು ಕಂಗಾಲಾಗಿದ್ದು, ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಈ ಘಟನೆ ನಡೆದಿದ್ದು ಕುಟುಂಬಸ್ಥರಿಗೆ ದೊಡ್ಡ ಅಘಾತ ನೀಡಿದೆ. ಈ ಬಗ್ಗೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv