ಪ್ರಿಯಾಂಕ್ ಖರ್ಗೆ ಬ್ಯಾನರ್​​ ತೆಗೆಯಲು ಹೋದವ ವಿದ್ಯುತ್ ಶಾಕ್​ಗೆ ಬಲಿ

ಕಲಬುರ್ಗಿ: ರಸ್ತೆಯಲ್ಲಿ ಬಿದ್ದಿದ್ದ ಸ್ವಾಗತ ಬ್ಯಾನರ್ ತೆಗೆಯಲು ಹೋದಾಗ ವಿದ್ಯುತ್ ತಗುಲಿ ವ್ಯಕ್ತಿ ಮೃತಪಟ್ಟಿರುವ ಘಟನೆ ನಗರದ ಹುಮ್ನಾಬಾದ್ ರಸ್ತೆಯ ಟಿವಿ ಸ್ಟೇಶನ್ ಮುಂಭಾಗದಲ್ಲಿ ನಡೆದಿದೆ.
ಹರಕಂಚಿ ಗ್ರಾಮದ ನಿವಾಸಿ ರಫೀಕ್ ಪಾಶಾ (28) ಮೃತ ದುರ್ದೈವಿ. ಕ್ರೂಸರ್ ವಾಹನ ಚಾಲಕನಾಗಿದ್ದ ರಫೀಕ್ ಪಾಶಾ, ನಿನ್ನೆ ನಗರದಲ್ಲಿ ನಡೆದ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ, ಇಂದು ಮುಂಜಾನೆ ಹರಕಂಚಿ ಗ್ರಾಮಕ್ಕೆ ತೆರಳುತ್ತಿದ್ದಾಗ ಟಿವಿ ಸ್ಟೇಷನ್ ಮುಂಭಾಗದಲ್ಲಿ ಸಚಿವ‌ ಪ್ರಿಯಾಂಕ್ ಖರ್ಗೆಗೆ ಸ್ವಾಗತ ಕೋರಿ ಹಾಕಲಾಗಿದ್ದ ಕಟೌಟ್ ರಸ್ತೆಯಲ್ಲಿ ಬಿದ್ದಿತ್ತು. ಇದರಿಂದ ಜನರಿಗೆ ತೊಂದರೆ ಆಗುತ್ತದೆ ಅಂತಾ ತನ್ನ ಕ್ರೂಸರ್​​​​ನ್ನು ನಿಲ್ಲಿಸಿ ರಫೀಕ್​​​ ಪಾಶಾ ಕಟೌಟ್ ತೆಗೆಯಲು ಹೋಗಿದ್ದ. ಆದರೆ ಕಟೌಟ್​​​​ಗೆ ವಿದ್ಯುತ್ ತಂತಿ ತಗುಲಿದ್ದರಿಂದ, ರಫೀಕ್​​​ ಪಾಶಾಗೆ ವಿದ್ಯುತ ಶಾಕ್ ಹೊಡಿದಿದೆ. ಹೀಗಾಗಿ ರಫೀಕ್​​ ಪಾಶಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಗೆ ಒಂದೂವರೇ ವರ್ಷದ ಒಂದು ಹೆಣ್ಣು ಮಗುವಿದ್ದು, ಮೃತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಅಂತ ಸಂಬಂಧಿಗಳು ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv