ಮಳೆಯಲ್ಲಿ ಬೈಕ್​ ಸ್ಕಿಡ್​ ಆಗಿ ಓರ್ವ ದುರ್ಮರಣ

ಕಲಬುರ್ಗಿ: ಅವಧಿಗೂ ಮುನ್ನ ಮುಂಗಾರು ರಾಜ್ಯಕ್ಕೆ ಅಡಿಯಿಟ್ಟಿದ್ದು, ರಾಜ್ಯದೆಲ್ಲೆಡೆ ಹಲವು ಅವಾಂತರಗಳನ್ನು ಸೃಷ್ಟಿಸುತ್ತಿದೆ. ನಿನ್ನೆ ತಡರಾತ್ರಿ ಕಲಬುರ್ಗಿಯಲ್ಲಿ ಸುರಿದ ಜಿಟಿಜಿಟಿ ಮಳೆಯಲ್ಲಿ ಬೈಕ್​​ವೊಂದು ಸ್ಕಿಡ್​ ಆಗಿ ಅವಘಡ ಸಂಭವಿಸಿದೆ. ಕಲಬುರ್ಗಿಯ ನಂದಿಕೂರು ಬಳಿ ತಡರಾತ್ರಿ ಬೈಕ್​ ಸ್ಕಿಡ್​ ಆಗಿ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡಿದ್ದಾನೆ.
ಹೊನ್ನಕಿರಣಗಿ ನಿವಾಸಿ ಶಿವಕುಮಾರ್ ಮೃತ ದುರ್ದೈವಿ. ಘಟನೆಯಲ್ಲಿ ಮಲ್ಲಿಕಾರ್ಜುನ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಫರಹತ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.