ವಿಶ್ವವಿಖ್ಯಾತ ಸಿಂಗರ್​​ ಅರಿಯಾನಾಗೆ ನಿಂಬೆಹಣ್ಣು ಕಾಟ, ಎಸೆದವರು ಯಾರು ಗೊತ್ತಾ..!?

ಅಮೆರಿಕಾದ ಪಾಪ್ ಸಿಂಗರ್, ಅರಿಯಾನಾ ಗ್ರಾಂಡೆ ಈ ಬಾರಿಯೂ ಕೊಚೆಲ್ಲಾ ವಾರ್ಷಿಕ ಸಂಗೀತೋತ್ಸವದಲ್ಲಿ ಪಾಲ್ಗೊಂಡು, ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಆದ್ರೆ ಇನ್ನೂ ಹೆಚ್ಚು ಗಮನ ಸೆಳೆದಿದ್ದು ಯಾರೋ ಸಭಿಕರೊಬ್ಬರು ಆಕೆಯ ಎದೆ ಭಾಗಕ್ಕೆ ಗುರಿಯಿಟ್ಟು ಎಸೆದ ನಿಂಬೆ ಹಣ್ಣು!

ಹೌದು ಅರಿಯಾನಾ ಗ್ರಾಂಡೆ ಗ್ರ್ಯಾಂಡ್​ ಎಂಟ್ರಿ ಕೊಡಲು ಬಳಕುತ್ತಾ, ಸ್ಟೇಜ್​​ ಮೇಲೆ ಹೆಜ್ಜೆ ಹಾಕಿದ್ದಳು. ಸರಿಯಾಗಿ ಆ ಸಮಯದಲ್ಲೇ ಗುರಿಯಿಟ್ಟು ಆಕೆಯತ್ತ ನಿಂಬೆ ಹಣ್ಣನ್ನು ಎಸೆದಿದ್ದಾರೆ. ಆದ್ರೆ ಯಾಕೆ ಆಕೆಯ ಮೇಲೆ ನಿಂಬೆ ಹಣ್ಣು ಎಸೆದರು, ಅಷ್ಟಕ್ಕೂ ಅದನ್ನು ಎಸೆದ ಪುಣ್ಯಾತ್ಮ ಯಾರು? ಆತನ ಉದ್ದೇಶ ಈಡೇರಿತಾ? ಎಂಬ ಪ್ರಶ್ನೆಗಳಿಗೆ ತಕ್ಷಣಕ್ಕೆ ಉತ್ತರ ದೊರೆತಿಲ್ಲವಾದರೂ ವ್ಯಾಪಕವಾಗಿ ಟ್ರೋಲ್​ ಆಗಿದೆ. ಇದಕ್ಕೆಲ್ಲಾ ಸಾಕ್ಷ್ಯವೆಂಬಂತೆ ಈ ಕೆಳಗೆ ವಿಡಿಯೋ ಇದೆ, ನೋಡಿಬಿಡಿ.

ಇದನ್ನೂ ಓದಿ:  N-A-S-A ಬಗ್ಗೆ ‘ನಾಸಾ’ದಿಂದಲೇ ಸಿಂಗರ್​ಗೆ ಟ್ವೀಟ್..!

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv