ಬ್ಯಾಟಿಂಗ್​​ನತ್ತ ಗಮನ ಕೊಡು ಎಂದವನಿಗೆ ಜಡ್ಡು ಹೇಳಿದ್ದೇನು..?

ಮೊದಲು ಬ್ಯಾಟಿಂಗ್​ ನತ್ತ ಗಮನ ಕೊಡು, ನಂತರ ಸ್ಟೈಲ್​ ಬಗ್ಗೆ ಯೋಚನೆ ಮಾಡು ಅಂತ, ಇತ್ತೀಚಿಗಷ್ಟೇ ಅಭಿಮಾನಿಯೊಬ್ಬ ರವೀಂದ್ರ ಜಡೇಜಾಗೆ ಟಾಂಗ್​ ಕೊಟ್ಟಿದ್ದ. ಅದಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕವೇ ಟೀಮ್​ ಇಂಡಿಯಾ ಆಲ್​ರೌಂಡರ್​​, ಅವರದ್ದೇ ದಾಟಿಯಲ್ಲಿ ಉತ್ತರ​ ನೀಡಿದ್ದಾರೆ.

ಇತ್ತೀಚಿಗಷ್ಟೇ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಹೇರ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದ ಜಡ್ಡು, ಹೇರ್​​ ಸ್ಟೈಲ್​ ಬಗ್ಗೆ ಯಾವುದಾದ್ರು ಸಲಹೆ ಇದೆಯಾ ಗಾಯ್ಸ್​ ಎಂದಿದ್ರು. ಇದಕ್ಕುತ್ತರಿಸಿದ್ದ ಅಭಿಮಾನಿಯೊಬ್ಬ ನಿನ್ನ ಬ್ಯಾಟಿಂಗ್​ನತ್ತ ಮೊದಲು ಗಮನ ಕೊಡು ಎಂದಿದ್ದ. ಇದಕ್ಕೆ ಉತ್ತರಿಸಿರುವ ಜಡೇಜಾ, ಬಹುಶಃ ನೀನು ಕಳೆದ ಪಂದ್ಯದಲ್ಲಿ ನನ್ನ ಪರ್ಫಾರ್ಮನ್ಸ್​ ನೋಡಿಲ್ಲ ಅನಿಸುತ್ತೆ. ನಿಮ್ಮ ಮನೆಯಲ್ಲಿ ಟಿವಿ ಇಲ್ಲದಿರಬಹುದು. ಮೊದಲು ಕಳೆದ ಪಂದ್ಯದ ನನ್ನ ಪ್ರದರ್ಶನ ನೋಡಿ ನಂತರ ಮಾತನಾಡು ಎಂದು ಅವರದ್ದೇ ದಾಟಿಯಲ್ಲಿ ಟಾಂಗ್​ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಅಬ್ಬರಿಸಿದ್ದ ಜಡೇಜಾ 114 ಎಸೆತಗಳಲ್ಲಿ 81 ರನ್​ ಗಳಿಸಿದ್ರು. ಅಷ್ಟೇ ಅಲ್ಲದೇ ರಿಷಬ್​ ಪಂತ್​ ಜೊತೆ 7ನೇ ವಿಕೆಟಿಗೆ 2-4 ರನ್​ಗಳ ಬೃಹತ್​ ಜೋತೆಯಾಟ ನೀಡಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv