ಜಮೀನು ವಿವಾದ: ರೌಡಿ ಶೀಟರ್​ನಿಂದ ಮಾರಣಾಂತಿಕ ಹಲ್ಲೆ

ಧಾರವಾಡ: ಜಮೀನು ವಿವಾದ ಹಿನ್ನೆಲೆಯಲ್ಲಿ ಕುಟುಂಬವೊಂದರ ಮೇಲೆ ರೌಡಿ ಶೀಟರ್ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ರೌಡಿ ಶೀಟರ್ ಗುರುನಾಥ ಗೌಡ ನಿನ್ನೆ ಸಂಜೆ ಹಲ್ಲೆ ಮಾಡಿದ್ದಾಗಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ವಿಠ್ಠಲ ಭೀಮಕ್ಕನವರ ಹಾಗೂ ಚನಬಸಪ್ಪ ಭೀಮಕ್ಕನವರ ಕುಟುಂಬಸ್ಥರು ಆರೋಪಿಸಿದ್ದಾರೆ. ದಿವಂಗತ ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶ ಗೌಡನ ಸಹೋದರ, ಗುರುನಾಥ ಗೌಡ ಸ್ಥಳೀಯ ಬಿಜೆಪಿ ಮುಖಂಡರಾಗಿದ್ದು, ಹಲ್ಲಗೊಳಗಾದವರ ಕುಟುಂಬಸ್ಥರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv