ಆಲಿಕಲ್ಲು ಮಳೆ: ಕರು ಸಾವು

ಕೋಲಾರ: ಜಿಲ್ಲೆಯ ಕೆಲವೆಡೆ ಇಂದು ‌ಮಧ್ಯಾಹ್ನ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಈ ಮಳೆಯಿಂದಾಗಿ ಸಿಡಿಲು ಬಡಿದು ಕರುವೊಂದು ಸಾವನ್ನಪ್ಪಿದ್ದರೆ, ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿರುವ ಗೋ ಶಾಲೆಯ ಛಾವಣಿ ಕುಸಿದಿದೆ. ಮಂಜುನಾಥ್ ಎಂಬುವರಿಗೆ ಸೇರಿದ ಗೋ ಶಾಲೆಯಲ್ಲಿದ್ದ, ಕರು ಸಾವನ್ನಪ್ಪಿದೆ. ಮೇವು ಸೇರಿದಂತೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಈ ಘಟನೆ ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv