ವಿಶ್ವಕಪ್ ತಂಡದಿಂದ ರಿಷಭ್​ ಪಂತ್​ರನ್ನ ಕೈಬಿಟ್ಟಿದ್ದೇಕೆ..?

ವಿಶ್ವಕಪ್ ತಂಡಕ್ಕೆ ಡೆಲ್ಲಿ ಡ್ಯಾಶರ್​ ರಿಷಭ್​ ಪಂತ್​ರನ್ನ ಆಯ್ಕೆ ಮಾಡದಿರುವದಕ್ಕೆ ಟೀಂ ಇಂಡಿಯಾ ಫ್ಯಾನ್ಸ್, ಮಾಜಿ ಕ್ರಿಕೆಟರ್ಸ್​ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.ಲೆಜೆಂಡ್​​ ಸುನಿಲ್​ ಗವಾಸ್ಕರ್​​ ರಿಷಬ್​ ಪಂತ್​ರನ್ನ ವಿಶ್ವಕಪ್​ ಟೂರ್ನಿಗೆ ಆಯ್ಕೆ ಮಾಡದಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ. ವಿಶ್ವಕಪ್​ಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಶಿಖರ್​ ಧವನ್ ಬಿಟ್ರೆ, ಸ್ಪೆಷಲಿಸ್ಟ್ ಎಡಗೈ ಬ್ಯಾಟ್ಸ್​​ಮನ್​ ಇಲ್ಲ.ಎಡಗೈ, ಬಲಗೈ ಬ್ಯಾಟಿಂಗ್ ಕಾಂಬಿನೇಷನ್ ಇದ್ರೆ ಎದುರಾಳಿ ತಂಡ ಗೊಂದಲಕ್ಕೊಳಗಾಗುತ್ತೆ. ಅಲ್ಲದೇ ಕೆಲ ಬೌಲರ್​ಗಳು ಎಡಗೈ ಬ್ಯಾಟ್ಸ್​​ಮನ್​ಗೆ ಬೌಲ್ ಮಾಡಲು ಪರದಾಡುತ್ತಾರೆ.ಟೀಂ ಇಂಡಿಯಾ ಪರ ರಿಷಭ್​ ಪಂತ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.ಸದ್ಯ ನಡೆಯುತ್ತಿರುವ ಐಪಿಎಲ್​ನಲ್ಲೂ ಪಂತ್ ಅಬ್ಬರಿಸುತ್ತಿದ್ದಾರೆ. ಹೀಗಿದ್ದರೂ ಆಯ್ಕೆ ಸಮಿತಿ ಯಾವ ಆಧಾರದ ಮೇಲೆ ಔಟ್​ ಆಫ್​ ಫಾರ್ಮ್​ನಲ್ಲಿರೋ ದಿನೇಶ್​ ಕಾರ್ತಿಕ್​ರನ್ನ ಆಯ್ಕೆ ಮಾಡಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ. ಪಂತ್​ರನ್ನ ವಿಶ್ವಕಪ್​ ನಿಂದ ಕೈ ಬಿಟ್ಟಿದ್ದೇಕೆ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾಗಳಲ್ಲಿ ಆಯ್ಕೆ ಸಮಿತಿಯನ್ನ ಪ್ರಶ್ನಿಸುತ್ತಿದ್ದಾರೆ.