ಮೋದಿಗಿಂತ ಚೆನ್ನಾಗಿ ಮಾತಾಡಬಲ್ಲೆ, ಆದ್ರೆ ನನಗೆ ಹಿಂದಿ ಬರೋದಿಲ್ಲ-ಹೆಚ್​​​.ಡಿ ದೇವೇಗೌಡ

ಕೊಪ್ಪಳ:  ಕಾವೇರಿ ಸಮಸ್ಯೆಗಾಗಿ ಕಣ್ಣೀರು ಹಾಕಿದ್ದು ದೇವೇಗೌಡರ ಕುಟುಂಬಸ್ಥರು. ಬಿಜೆಪಿಯವರಾಗಲಿ, ಕಾಂಗ್ರೆಸ್ ನವರಾಗಲಿ ಕಣ್ಣೀರು ಹಾಕಿಲ್ಲ. ರಾಜ್ಯ ಹಾಗೂ ಕೇಂದ್ರ ಸೇರಿ ಎರಡೂ ಸರ್ಕಾರಗಳಲ್ಲಿ ಅಷ್ಟು ಮಂತ್ರಿಗಳಿದ್ರು. ಅವರು ಯಾರೂ ರೈತರ ಪರ ಹೋರಾಟ ಮಾಡಲಿಲ್ಲ. ರಾಜ್ಯದ ಸಮಸ್ಯೆ ಬಂದಾಗ ರೈತರ ಪರವಾಗಿ ಕಣೀರು ಹಾಕಿದ್ದು ಹಾಗೂ ಹೋರಾಟ ಮಾಡಿದ್ದು ಮಾತ್ರ  ದೇವೆಗೌಡ್ರು ಕುಟುಂಬದವರೇ ಎಂದು ಮಾಜಿ ಪ್ರಧಾನಿ ದೇವೇಗೌಡರು ಕೊಪ್ಪಳದ ಖಾಸಗಿ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.

ಇನ್ನು ಇದೇ ವೇಳೆಯಲ್ಲಿ 20 % ಸರ್ಕಾರ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ದೇವೇಗೌಡ್ರು. 17 ರಾಜ್ಯದಲ್ಲಿ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಅವರು ಅಲ್ಲಿ ಪರ್ಸಂಟೇಜ್​​ ಆಡಳಿತ ನಡೆಸುತ್ತರಾ? ಇದನ್ನು ನಾನು ಪಾರ್ಲಿಮೆಂಟ್ ನಲ್ಲಿ ಪ್ರಶ್ನೆ ಮಾಡುತ್ತೇನೆ. ಮೋದಿಗಿಂತ ನಾನು ಚೆನ್ನಾಗಿ ಮಾತಾಡಬಲ್ಲೆ. ಆದ್ರೆ ನನಗೆ ಹಿಂದಿ ಬರೋದಿಲ್ಲ. ಮಾತಾಡಬೇಕಾದ್ರೆ ಮೋದಿ ಮಾತಿನ ಮೇಲೆ ಹಿಡಿತ ಇರಬೇಕು ಎಂದು ದೇವೆಗೌಡರು ವಾಗ್ದಾಳಿ ನಡೆಸಿದ್ರು. ಅಲ್ಲದೆ, ಮೈತ್ರಿ ಕೂಟ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ತೀವಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ನಾನು ಬಾಕಿ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದೇವೆ. ಈಗಾಗಲೇ ಮತದಾರನ ತೀರ್ಪು ಪೆಟ್ಟಿಗೆಯಲ್ಲಿ ಸೀಲ್ ಆಗಿದೆ. ಮತದಾರರ ತೀರ್ಪನ್ನು ನಾವು ಒಪ್ಪಬೇಕು ಹಾಗೂ ಗೌರವಿಸಬೇಕು ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv