ವಿಶ್ವಕಪ್ ಹೀರೋಗಳ ಜೊತೆ 83 ಚಿತ್ರ ತಂಡ ಭರ್ಜರಿ ಪ್ರಾಕ್ಟಿಸ್..!

ಕಬೀರ್ ಖಾನ್ ನಿರ್ದೇಶನದ 83 ಚಿತ್ರ ತಂಡ ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿದೆ. ಸದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ಬೀಡು ಬಿಟ್ಟಿರುವ 83 ಚಿತ್ರ ತಂಡಕ್ಕೆ, 1983 ವಿಶ್ವಕಪ್ ತಂಡದ ಗೆಲುವಿನ ಸದಸ್ಯರುಗಳಾದ ತಂಡದ ನಾಯಕ ಕಪಿಲ್ ದೇವ್, ಮೊಹಿಂದರ್ ಅಮರ್​ನಾಥ್ ಮತ್ತು ಬಲ್ವಿಂಧರ್ ಸಿಂಗ್ ಸಂಧು, ಪಾಠ ಹೇಳಿಕೊಡುತ್ತಿದ್ದಾರೆ. ಕಪಿಲ್ ದೇವ್, ನಟ ರಣವೀರ್​ ಸಿಂಗ್​ಗೆ ನೆಟ್ಸ್​ನಲ್ಲಿ ತನ್ನ ಫೇವರಿಟ್ ಶಾಟ್​ ಹೇಳಿಕೊಡುತ್ತಿದ್ರೆ, ಸಾಕಿಬ್ ಸಲೀಂಗೆ ಅಮರ್​ನಾಥ್ ಸ್ವಿಂಗ್​​ ಮಾಡೋದು ಹೇಗೆ ಅಂತ ಟಿಪ್ಸ್ ನೀಡುತ್ತಿದ್ರು.