ಮೈಸೂರಲ್ಲಿ ಮತದಾನ ಜಾಗೃತಿಗೆ ಸೈಕ್ಲೋಥಾನ್: ಮಾಜಿ ಕ್ರಿಕೆಟಿಗ ಜಾವಗಲ್​ ಶ್ರೀನಾಥ್​ ಚಾಲನೆ

ಮೈಸೂರು: ಸ್ವೀಪ್ ಕಮಿಟಿ ವತಿಯಿಂದ, ಮತದಾನದ ಕುರಿತು ಜಾಗೃತಿ ಮೂಡಿಸಲು ಪೆಡಲ್ ಫಾರ್ ಡೆಮಾಕ್ರಸಿ ಸೈಕ್ಲೋಥಾನ್ ನಡೆಯಿತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ  ಈ ವಿನೂತನ ಕಾರ್ಯಕ್ರಮಕ್ಕೆ  ಅಂತರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಾವಗಲ್​ ಶ್ರೀನಾಥ್​ ಚಾಲನೆ ನೀಡಿದ್ರು.

ಮುಂಜಾನೆಯೇ ಸಾವಿರಾರು ಜನರು ಶ್ವೇತವಸ್ತ್ರ ಧರಿಸಿ, ಸೈಕಲ್ ತುಳಿಯುವ ಮೂಲಕ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲು 8 ಕಿ.ಮೀ. ಸೈಕ್ಲೋಥಾನ್ ನಡೆಸಿದ್ರು. ಕಾರ್ಯಕ್ರಮದಲ್ಲಿ ಜಾವಗಲ್ ಶ್ರೀನಾಥ್, ನಟ ಡಾಲಿ ಧನಂಜಯ್, ಗಾಯಕ ಶ್ರೀಹರ್ಷ ಸೇರಿದಂತೆ ಪ್ರಮುಖರು ಭಾಗಿಯಾಗಿದ್ರು.

ಈ ವೇಳೆ ಮಾತನಾಡಿದ ಜವಗಾಲ್ ಶ್ರೀನಾಥ್, ಮತದಾನ ಜಾಗೃತಿಗಾಗಿ ಬಹೃತ್ ಸೈಕ್ಲೋಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತ ಕೂಡ ಮುಖ್ಯ. ನಮ್ಮ ದೇಶದ ಒಳಿತಿಗಾಗಿ ಉತ್ತಮರನ್ನ ಅಯ್ಕೆ ಮಾಡುವ ಅವಕಾಶ ಇದು. ನಾವು ಮತದಾನ ಮಾಡದಿದ್ರೆ ಐದು ವರ್ಷಗಳ ಕಾಲ ಶಿಕ್ಷೆ ಅನುಭವಿಸಬೇಕಾಗುತ್ತೆ ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv