700 ಮೆಟ್ರಿಕ್ ಟನ್ ಮರಳು ಸೀಜ್.

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಯರುಂಡಗಿ- ಬಾಗೂರ ಗ್ರಾಮಗಳ ಮಧ್ಯದಲ್ಲಿ ಕೃಷ್ಣಾ ನದಿಯ ದಡದ ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ  ಸುಮಾರು 7೦೦ ಮೆಟ್ರಿಕ್ ಟನ್ ಮರಳು ಜಪ್ತಿಯಾಗಿದೆ.
ಪಟ್ಟಾ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ 4 ಲಕ್ಷ ಮೌಲ್ಯದ ಮರಳು ಸೇರಿದಂತೆ ಒಂದು ಟಿಪ್ಪರ್​ ಲಾರಿ ಸೀಜ್ ಮಾಡಿ ಪೊಲೀಸರು ವಶಕ್ಕೆ ಪಡೆದ್ದಿದ್ದಾರೆ. ದೇವದುರ್ಗ ಸಿಪಿಐ ಸಂಜೀವಕುಮಾರ್ ನೇತೃತ್ವದಲ್ಲಿ ಪೊಲೀಸರ ಕಾರ್ಯಾಚರಣೆ ನಡೆಸಲಾಗಿತ್ತು. ಸದ್ಯ ಮರಳು ದಂಧೆ ಕರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ ಸೂಚನೆ ಮತ್ತು ಅಬಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv