ಆಟೋಗೆ ಎಪಿಆರ್​​​ಟಿಸಿ ಬಸ್​ ಡಿಕ್ಕಿ, 7 ಜನ ದುರ್ಮರಣ

ರಾಯಚೂರು: ಆಂಧ್ರಪ್ರದೇಶದ ಕರ್ನೂಲ್ ಬಳಿ ಬೆಳ್ಳಂಬೆಳ್ಳಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕರ್ನೂಲ್​ನ ಸೋಮಯಾಜುಲಪಲ್ಲಿಯ ಹೊರವಲಯದಲ್ಲಿ ಆಟೋಗೆ ಎಪಿಆರ್​​​ಟಿಸಿ ಬಸ್​​ವೊಂದು ಡಿಕ್ಕಿ ಹೊಡೆದು ಅಪಘಾತದ ಸಂಭವಿಸಿದೆ. ಅಪಘಾತದಲ್ಲಿ 7 ಜನರು ಮೃತಪಟ್ಟಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಬಸ್​ ಚಾಲಕ ಪರಾರಿಯಾಗಿದ್ದಾನೆ. ಆಟೋದಲ್ಲಿದ್ದ ಜನರು ಸೋಮಯಾಜುಲಪಲ್ಲಿಯಿಂದ ನಾಟಿ ಔಷಧಿ ಪಡೆಯಲು ಮಹಾನಂದಿಗೆ ತೆರಳುತ್ತಿದ್ದರು ಎನ್ನಲಾಗಿದೆ. ದುರ್ಘಟನೆಯಲ್ಲಿ ಮೃತಪಟ್ಟವರು ಕೋಮೂರು ಮಂಡಲದ ಚೆನುಗೊಂಡ್ಲ, ಕಳ್ಲವಾರಿ ಗ್ರಾಮದವರು ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಕರ್ನೂಲ್​​​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.