ತನ್ನ ಕಾರಿನ ರಿಪೇರಿಗೆ ಬೇರೆಯವರ ಕಾರು ಕದೀತಿದ್ದ..!

ಮುಂಬೈ: ಕಾರು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನಿಗೆ ಮುಂಬೈ ಪೊಲೀಸರು ಖೆಡ್ಡಾ ತೋಡಿದ್ದಾರೆ. ಇವ್ನು ಸಾಮಾನ್ಯ ಕಳ್ಳನಲ್ಲ. ಟ್ಯಾಕ್ಸಿ ಓಡಿಸುತ್ತಲೆ ಕಾರು ಕಳ್ಳತನದ ದಂಧೆಯಲ್ಲಿ ಇಳಿದಿದ್ದ. ಅಷ್ಟಕ್ಕೂ ಇವ್ನು ಕಾರುಗಳನ್ನು ಕದಿತಿದ್ದಿದ್ದು, ಯಾಕ್ಕೆ ಅಂತಾ ಕೇಳಿದ್ರೆ ಆಶ್ಚರ್ಯ ಪಡ್ತೀರಾ..

ತನ್ನ ಕಾರುಗಳಿಗಾಗಿ ಬೇರೆಯವರ ಕಾರು ಕದಿಯೋದು..!

ಅಂದ್ಹಾಗೆ ಖದೀಮನ ಹೆಸ್ರು ಮೊಹಮ್ಮದ್ ಕಮಿಲ್ ನೂರ್ ಮೊಹಮ್ಮದ್ ಅನ್ಸಾರಿ. ವಯಸ್ಸು 65 ವರ್ಷ. ಇವ್ನ ಹೆಸ್ರು ಎಷ್ಟು ಉದ್ದ ಇದೆಯೋ ಅಷ್ಟೇ ದೊಡ್ಡದಾಗಿದೆ ಇವ್ನ ಮೇಲಿರೋ ಕೇಸ್‌ ಲಿಸ್ಟ್‌. ಈ ಅನ್ಸಾರಿ ನಗರದ ನಾಗ್‌ಪಾಡದಲ್ಲೊಂದು, ದಿಂಡೋಶಿಯ ಗೋರಿಗಾನ್‌ನಲ್ಲಿ ಎರಡು ಮನೆ ಹೊಂದಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ. ಇವನ ಬಳಿ ನಾಲ್ಕು ಕಾರುಗಳಿದ್ದು, ಟ್ಯಾಕ್ಸಿ ಓಡಿಸಿಕೊಂಡಿದ್ದಾನೆ. ಆದ್ರೆ, ಅವ್ನ ಕಾರುಗಳು ಏನಾದ್ರು ಕೆಟ್ಟುಹೋದ್ರೆ ಅದಕ್ಕೆ ಬೇಕಾದ ಪಾರ್ಟ್ಸ್‌ಗಳನ್ನ ಕೊಂಡುಕೊಂಡು ಬಂದು ರಿಪೇರಿ ಮಾಡಿಸುತ್ತಿರಲಿಲ್ಲ. ರಿಪೇರಿಗೆ ಬೇಕಾದ ಪಾರ್ಟ್ಸ್‌ಗಳಿಗಾಗಿ ಬೇರೆಯವರ ಕಾರನ್ನೇ ಕದಿತಿದ್ದನಂತೆ.
ಡೂಪ್ಲಿಕೇಟ್ ಕೀಗಳನ್ನು ಬಳಸಿ ಮನೆಮುಂದೆ ನಿಲ್ಲಿಸಿದ, ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕ್‌ ಮಾಡಿದ ಕಾರುಗಳನ್ನು ಎಗರಿಸಿಕೊಂಡು ಹೋಗ್ತಿದ್ದ. ಅಲ್ಲದೇ ತನ್ನ ಕಾರುಗಳಿಗೆ ಬೇಕಾದ ಪಾರ್ಟ್ಸ್‌ಗಳನ್ನು ಬಿಚ್ಚಿಕೊಂಡು ನಂತರ ಆ ಕಾರನ್ನು ಗುಜರಿ ವ್ಯಾಪಾರಿಗಳಿಗೆ ಮಾರುತ್ತಿದ್ದನಂತೆ. ಇವನ ಈ ದಂಧೆ ಇಂದು ನಿನ್ನೆಯಿಂದ ಶುರುವಾಗಿರೋದಲ್ಲ. ಬರೊಬ್ಬರಿ 20 ವರ್ಷಗಳಿಂದ ಆಸಾಮಿ ಇದೇ ರೀತಿ ಬೇರೆಯವರ ಕಾರು ಕದ್ದು ತನ್ನ ಕಾರು ರಿಪೇರಿ ಮಾಡಿಸಿಕೊಳ್ಳುತ್ತಿದ್ದ. ಈಗ ಮತ್ತೆ ಕಾರೊಂದನ್ನ ಕದಿಬೇಕಾದ್ರೆ ಪೊಲೀಸರ ಬಲೆಗೆ ಬಿದ್ದಿದ್ದಾನೆ ಅನ್ಸಾರಿ. ಸದ್ಯ ಕಂಬಿ ಎಣಿಸ್ತಿರೋ ಅನ್ಸಾರಿ, ಇಲ್ಲಿವರೆಗೂ ತಾನು ಕದ್ದಿರುವ ಕಾರುಗಳ ಲೆಕ್ಕವನ್ನೂ ನೆನಪು ಮಾಡಿಕೊಳ್ತಿದ್ದು, ಪೊಲೀಸರಿಗೆ ಇನ್ನೂ ಅದೆಷ್ಟು ಶಾಕಿಂಗ್ ನ್ಯೂಸ್ ಕೊಡ್ತಾನೋ ಗೊತ್ತಿಲ್ಲ. ಆದ್ರೆ, ಸದ್ಯ ಅನ್ಸಾರಿ ಅರೆಸ್ಟ್ ಆಗಿರೋದ್ರಿಂದ, ಕಾರುಗಳ ಮಾಲೀಕರು ಮಾತ್ರ ಸಣ್ಣ ರಿಲೀಫ್​ನಲ್ಲಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv