ರಾಜ್ಯದಲ್ಲಿ ಎರಡನೇ ಹಂತದಲ್ಲಿ ಶೇ. 61ರಷ್ಟು ಮತದಾನ

ಬೆಂಗಳೂರು: ದೇಶದಾದ್ಯಂತ ಇಂದು ನಡೆದ ಮೂರನೇ ಹಂತದ ಹಾಗೂ ರಾಜ್ಯದಲ್ಲಿ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನ ಕಾರ್ಯ ಮುಕ್ತಾಯಗೊಂಡಿದೆ. ಇದೀಗ ಬಂದ ಮಾಹಿತಿ ಪ್ರಕಾರ 8 ಗಂಟೆ ವೇಳೆಗೆ ಶೇ. 61 ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. ಈ ಪೈಕಿ ಹೆಚ್ಚು ಕುತೂಹಲ ಮೂಡಿಸಿದ್ದ ಮಾಜಿ ಸಿಎಂ ಮಕ್ಕಳು ಸ್ಪರ್ಧಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದೆ.

ರಾತ್ರಿ 8 ಗಂಟೆಗೆ ಶೇ.61 ರಷ್ಟು ಮತದಾನ

 1. ಶಿವಮೊಗ್ಗ: ಶೇ.69
 2. ದಾವಣಗೆರೆ: ಶೇ.67
 3. ಉತ್ತರ ಕನ್ನಡ: ಶೇ.66
 4. ಚಿಕ್ಕೋಡಿ: ಶೇ.66
 5. ಹಾವೇರಿ: ಶೇ.64
 6. ಬಾಗಲಕೋಟೆ: ಶೇ.64
 7. ಬಳ್ಳಾರಿ: ಶೇ.62
 8. ಧಾರವಾಡ: ಶೇ.62
 9. ಕೊಪ್ಪಳ: ಶೇ.61
 10. ಬೆಳಗಾವಿ: ಶೇ.59
 11. ಬೀದರ್: ಶೇ.57
 12. ವಿಜಯಪುರ: ಶೇ.54
 13. ಕಲಬುರ್ಗಿ: ಶೇ.52
 14. ರಾಯಚೂರು: ಶೇ. 52