‘ನೇಮಕಾತಿ ಅಕ್ರಮ ಸಾಬೀತು: 61 ಪಿ.ಪಿ, ಪ್ಲೀಡರ್​​ಗಳ ವಜಾಗೊಳಿಸಿ’

ಹುಬ್ಬಳ್ಳಿ: 2013-14 ನೇ ಸಾಲಿನಲ್ಲಿ ನೇಮಕವಾಗಿದ್ದ ಸಹಾಯಕ ಅಭಿಯೋಜಕರ ಆಯ್ಕೆಯಲ್ಲಿ ನಡೆದಿದ್ದ ಅಕ್ರಮ, ತನಿಖಾ ವಿಚಾರಣೆಯಿಂದ ಸಾಬೀತಾಗಿದೆ. ಆದ್ರೆ ಇದುವರೆಗೂ ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಮಾಜ‌ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವ್ರು ಮುಖ್ಯಮಂತ್ರಿ ಆಗಿದ್ದ ವೇಳೆ ನಡೆದ ಗಂಭೀರವಾದ ಸ್ಕ್ಯಾಂಡಲ್ ಇದಾಗಿದೆ. ಇದರಲ್ಲಿ 61 ಜನ ಎಪಿಪಿ (ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ಸ್​) ಹಾಗೂ ಎಜಿಪಿ (ಅಸಿಸ್ಟೆಂಟ್ ಗವರ್ನಮೆಂಟ್ ಪ್ಲೀಡರ್) ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಆದ್ರೆ ಇದರಲ್ಲಿ ಹಗರಣ ನಡೆದು, ಬೆಂಗಳೂರು ಮೂಲದ ಒಬ್ಬ ವ್ಯಕ್ತಿ ಅದನ್ನು ಬಯಲಿಗೆ ತಂದಿದ್ದರು ಎಂದು ಹಗರಣದ ಕುರಿತು ಅವ್ರು ಮಾಹಿತಿ ನೀಡಿದರು.

ಅಕ್ರಮ ಕುರಿತಾಗಿ ಸ್ಥಾನಿಕ ನ್ಯಾಯಾಲಯದಲ್ಲಿ ಆ ವ್ಯಕ್ತಿ ದೂರು ದಾಖಲು ಮಾಡಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಲೋಕಾಯುಕ್ತ ಪೊಲೀಸರಿಗೆ ಪ್ರಕರಣದ ತನಿಖೆ ನಡೆಸುವಂತೆ 2014ರ ಡಿಸೆಂಬರ್ 10 ರಂದು ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಪೊಲೀಸರು ವ್ಯವಸ್ಥಿತವಾಗಿ ತನಿಖೆ ನಡೆಸಿ, ದೋಷಾರೋಪ ಪಟ್ಟಿಯನ್ನು ಈಗ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ದೋಷಾರೋಪ ಪಟ್ಟಿಯಲ್ಲಿ 61 ಜನರು ಅಕ್ರಮವೆಸಗಿರುವುದು ಬಯಲಾಗಿತ್ತು. ಕಾರಣ ಹೋಂ ವಿಭಾಗದ ಅಡಿಷನಲ್ ಚೀಫ್​ ಸೆಕ್ರೆಟರಿ 61 ಜನರನ್ನು ಕೆಲಸದಿಂದ ವಜಾ ಮಡಬೇಕೆಂದು ಹೋಂ​ ವಿಭಾಗದ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಈ ವರೆಗೂ ಆ 61 ಜನರನ್ನು ವಜಾ ಮಾಡಿಲ್ಲ. ಈಗಿರುವ ಹೋಂ​ ವಿಭಾಗದ ಮುಖ್ಯಸ್ಥ ವಿಜಯ್​ ಭಾಸ್ಕರ್ ಅವರಾದರೂ ಆ 61 ಜನರನ್ನು ವಜಾ ಮಾಡಬೇಕೆಂದು ಎಸ್. ಆರ್. ಹಿರೇಮಠ್​ ಒತ್ತಾಯಿಸಿದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv