ಜನನಿಬಿಡ ಪ್ರದೇಶಗಳಲ್ಲಿ ಕಿಸೆಗಳ್ಳತನ: ಆರೋಪಿಗಳ ಅರೆಸ್ಟ್​

ಹುಬ್ಬಳ್ಳಿ: ನಗರದ ರೈಲು, ಬಸ್ ನಿಲ್ದಾಣ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಕಿಸೆಗಳ್ಳತನ ಮಾಡುತ್ತಿದ್ದ ಆರು‌ ಮಂದಿಯನ್ನು ಬಂಧಿಸುವಲ್ಲಿ ನಗರದ ದಕ್ಷಿಣ ಪೊಲೀಸ್ ಉಪ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಿಂಗರಾಜ್ ಕರಿಗಾರ್, ಮಧುಕರ್ ಬೆಸ್ತರ್, ವಿಷ್ಣು ಬಾರಕೇರ್, ವಿಶಾಲ್ ಬಳ್ಳಾರಿ, ಹೂವಪ್ಪ, ವಿನಾಯಕ್ ಸಂಗದ್ ಬಂಧಿತ ಆರೋಪಿಗಳು. ಇವರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದರು ಎನ್ನಲಾಗಿದೆ.‌ ಇತ್ತೀಚೆಗೆ ನಗರದಲ್ಲಿ ಕಿಸೆಗಳ್ಳತನ‌ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಕಿಸೆಗಳ್ಳರನ್ನು ಬಂಧಿಸುವಂತೆ ಖಡಕ್​ ಆದೇಶ ನೀಡಿದ್ದರು. ಹೀಗಾಗಿ ನಗರ ಪೊಲೀಸರು ಒಂದು ವಿಶೇಷ ತಂಡ ರಚನೆ ಮಾಡಿ ಕಿಸೆಗಳ್ಳರನ್ನು ಬಂಧಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv