2 ಅಮೆರಿಕಾ ಸೇನಾ ವಿಮಾನಗಳ ಪತನ: 6 ಸಿಬ್ಬಂದಿ ನಾಪತ್ತೆ

ವಾಷಿಂಗ್ಟನ್​​: ಜಪಾನ್​ ಕರಾವಳಿ ಪ್ರದೇಶದಲ್ಲಿ ಅಮೇರಿಕಾದ ಎರಡು ಸೇನಾ ವಿಮಾನಗಳು ಪತನಗೊಂಡಿದ್ದು, 6 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ರೀಫ್ಯೂಲಿಂಗ್​ ಕಾರ್ಯ ಮಾಡುವ ವೇಳೆ ಈ ಅವಘಡ ಸಂಭವಿಸಿದೆ ಎಂದು ಜಪಾನ್​​ ರಕ್ಷಣಾ ಸಚಿವರು ತಿಳಿಸಿದ್ದಾರೆ. ಎಫ್​​/ಎ-18 ಯುದ್ಧವಿಮಾನ ಹಾಗೂ ಕೆಸಿ-130 ರೀಫ್ಯೂಲಿಂಗ್ ವಿಮಾನ ಒಂದಕ್ಕೊಂದು ಡಿಕ್ಕಿಯಾಗಿ ಪತನಗೊಂಡಿವೆ ಎಂದು ಹೇಳಲಾಗ್ತಿದೆ. ಎಫ್​​/ಎ-18 ವಿಮಾನದಲ್ಲಿ ಇಬ್ಬರು ಇದ್ದರು ಹಾಗೂ ಕೆಸಿ-130 ರೀಫ್ಯೂಲಿಂಗ್​ ಟ್ಯಾಂಕರ್​​ನಲ್ಲಿ 5 ಸಬ್ಬಂದಿ ಇದ್ದರು. ಯುದ್ಧವಿಮಾನದಲ್ಲಿದ್ದ ಒಬ್ಬರು ಸಿಬ್ಬಂದಿ ಸದಸ್ಯರನ್ನು ರಕ್ಷಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ನಾಪತ್ತೆಯಾಗಿರುವ ಉಳಿದ ಸಿಬ್ಬಂದಿಗಾಗಿ ಅಮೇರಿಕಾ ಸೇನೆ ಹಾಗೂ ಜಾಪನೀಸ್​ ಸೆಲ್ಫ್​​​ ಡಿಫೆನ್ಸ್​ ವಿಮಾನಗಳು ಶೋಧ ಕಾರ್ಯ ನಡೆಸುತ್ತಿವೆ.