ಗಿರಿಗಳನಾಡು ಯಾದಗಿರಿಯಲ್ಲಿ ಹೀಗೊಂದು ಸಾಮೂಹಿಕ ವಿವಾಹ

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೆ ರೈತರು ಕಂಗಾಲಾಗಿ ಜಮೀನಿನಲ್ಲಿ ಬಿತ್ತಿದ ಬೆಳೆಯು ಕೈ ಸೇರದೆ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇತ್ತ ಸಾಲದ ಹೊರೆಯ ಚಿಂತೆ ಒಂದುಕಡೆಯಾದ್ರೆ ಮನೇಲಿ ಬೆಳೆದು ನಿಂತ ಮಕ್ಕಳ ಮದುವೆ ಚಿಂತೆ ಮತ್ತೊಂದು ಕಡೆ. ಹೀಗಿರೋವಾಗ ರೈತರಿಗೆ ನೆರವಾಗಿದ್ದು ಉಚಿತ ಸಾಮೂಹಿಕ ವಿವಾಹ. ಹೌದು, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಿದ್ಧಾರೂಡ ಮಠದಲ್ಲಿ ಡಾ ಬಿ.ಅರ್. ಅಂಬೇಡ್ಕರ್​ ಅವರ 127ನೇ ಜಯಂತಿಯ ಅಂಗವಾಗಿ “ಸಮತಾ ಸೈನಿಕ ದಳ” ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡಿತ್ತು. ಈ ವೇಳೆ 51 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿದ್ದು, ಬಡ ರೈತರಲ್ಲಿ ನೆಮ್ಮದಿ ಮೂಡಲು ಕಾರಣವಾಗಿದೆ.
ಇನ್ನು ಸಾಲದ ಸುಳಿಯಲ್ಲಿ ಸಿಕ್ಕ ರೈತರು ಸಾಲಮನ್ನಾಕ್ಕೆ ಆಗ್ರಹಿ ರಾಜ್ಯ ಸರ್ಕಾರವನ್ನು ಒತ್ತಾಯಿಸ್ತಿದ್ದಾರೆ, ಆದ್ರೆ ಸಾಲಮನ್ನ ಮಾಡುವ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಘೋಷಣೆ ಕೂಡ ಮಾಡಿಲ್ಲ. ಮತ್ತಷ್ಟು ಸಾಲವಾಗದಂತೆ ಇಲ್ಲಿನ ರೈತರು ಸಾಮೂಹಿಕ ವಿವಾಹದ ಮೊರೆ ಹೋಗಿ ಮಕ್ಕಳ ದುಂದು ವೆಚ್ಚದ ಮದುವೆಗೆ ಕಡಿವಾಣ ಹಾಕಿದ್ದಾರೆ. ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಮಹದೇವ ದಿಗ್ಗಿ ಸಮ್ಮುಖದಲ್ಲಿ 51 ಜೋಡಿಗಳ ಸಾಮುಹಿಕ ವಿವಾಹ ನಡೆಯಿದಿದ್ದು, ಇದರಲ್ಲಿ ರೈತರ ಮಕ್ಕಳ ಮದುವೆಗಳೇ ಹೆಚ್ಚಾಗಿದ್ದರಿಂದ ನಮ್ಮಿಂದ ರೈತರಿಗೆ ಒಂದು ಚಿಕ್ಕ ಸಹಾಯವಾಗಿದೆ ಎನ್ನುತ್ತಾರೆ ಅವರು. ಸಾಮೂಹಿಕ ಮದುವೆಯಲ್ಲಿ ವಧುಗಳಿಗೆ ಸೀರೆ, ಕಾಲುಂಗುರ, ತಾಳಿ ನೀಡಲಾಯಿತು. ಭೋದಿಷ್ಟ ಸ್ವಾಮೀಜಿ ಆಶೀರ್ವಚನ ಭೋದಿಸಿದ ನಂತರ ಮಾಂಗಲ್ಯ ಧಾರಣೆ ಕಾರ್ಯಕ್ರಮ ನಡೆಸಿದರು. ನವ ವಧುವರರ ಮೇಲೆ ಪುಶ್ಪಾರ್ಚನೆ ಹಾಗೂ ಅಕ್ಕಿಕಾಳು ಹಾಕುವ ಮೂಲಕ ಶುಭ ಕೋರಿದ್ರು.
ಒಟ್ಟಿನಲ್ಲಿ “ಸಮತಾ ಸೈನಿಕ ದಳ” ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹದಿಂದ ರೈತರಿಗೆ ಸಹಾಯ ಆಗಿದ್ದಲ್ಲದಲೇ ದುಂದುವೆಚ್ಚದ ಮದುವೆಗಳಿ ಕಡಿವಾಣ ಎಂಬುದಕ್ಕೆ ಮಾದರಿ ಆಗಿದೆ. ಇನ್ನಷ್ಟು ಜನರು ಇಂತಹ ಸರಳ ವಿವಾಹ ಆಗುವ ಮೂಲಕ ಮದುವೆ ಆಗುವ ಯುವಕರು ಮತ್ತು ಸಾಮೂಹಿಕ ವಿವಾಹ ಏರ್ಪಡಿಸುವ ಇಂಥಹ ಸಂಘ ಪರಿವಾರಗಳು ಸಮಾಜಕ್ಕೆ ಮಾದರಿಯಾಗಬೇಕು ಎನ್ನುವುದು ರೈತರ ಅಶಯ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv