130 ವರ್ಷದ ಮೊಸಳೆ ಇನ್ನಿಲ್ಲ, ಅಂತಿಮ ದರ್ಶನಕ್ಕೆ ಬಂದ್ರು 500ಕ್ಕೂ ಹೆಚ್ಚು ಮಂದಿ…!

ರಾಯ್​ಪುರ್​: ನಮ್ಮ ದೇಶದಲ್ಲಿ ವೆರೈಟಿ ವೆರೈಟಿ ಸ್ಟೋರೀಸ್​ ಇರುತ್ತೆ ಅಂತ ಇದನ್ನ ನೋಡಿದ ಮೇಲೆ ಗೊತ್ತಾಗುತ್ತೆ. ಯಾಕಂದ್ರೇ, ಎಲ್ಲವೂ ಒಂಥರಾ ಡಿಫ್ರೆಂಟ್​. ನಾವು ಯಾವುದಾದ್ರು ಝೂಗೆ ಹೋದ್ರೇ, ಎಲ್ಲಾ ತರ ಪ್ರಾಣಿಗಳನ್ನ ನೋಡ್ತಿವಿ. ನೀರನ್ನ ನೋಡುದ್ರೇನೇ ಒಂಥರ ಭಯ, ಆದ್ರೇ ಅದ್ರೊಳಗಿರೋ ಮೊಸಳೆ ಅಂದ್ರೇ ಇನ್ನೂ ಭಯನೇ ಬಿಡಿ. ಆದ್ರೆ ಇಲ್ಲೊಂದು ಊರಿನ ಜನಕ್ಕೆ ಮೊಸಳೆ ಅಂದ್ರೆ ಕಿಂಚಿತ್ತು ಭಯ ಇಲ್ಲ.
ಸಾಮಾನ್ಯವಾಗಿ ಮೊಸಳೆಗೆ 70 ರಿಂದ 80 ವರ್ಷ ಆಯಸ್ಸು. ಆದ್ರೆ ಚತ್ತೀಸ್​​ಗಢದ ಬವಮೋಹೊತ್ರ ಹಳ್ಳಿಯಲ್ಲಿದ್ದ ಈ ಮೊಸಳೆಗೆ ಬರೋಬ್ಬರೀ 130 ವರ್ಷ. ಅದರ ಹೆಸರು ಗಂಗರಂ. ನಿನ್ನೆ ಬೆಳಿಗ್ಗೆ ಬವಮೋಹೊತ್ರ ಹಳ್ಳಿಯವರಿಗೆ ಶಾಕಿಂಗ್​ ನ್ಯೂಸ್​ವೊಂದು ಕಾದಿತ್ತು. ಗಂಗರಂ ಪ್ರಾಣಬಿಟ್ಟಿತ್ತು. ಸುದ್ದಿ ತಿಳಿಯುತ್ತಿದ್ದಂತೇ ಊರಿನ ಜನರೆಲ್ಲಾ ಓಡಿಬಂದ್ರು. ಮೃತ ಮೊಸಳೆಗೆ ಮನುಷ್ಯರಿಗೆ ಅಂತಿಮ ಕಾರ್ಯ ಮಾಡುವ ಹಾಗೆ, ಆ ಜನ ಅಂತ್ಯಕ್ರಿಯೆ ನೆರವೇರಿಸಿದ್ರು.

ಈ ಕ್ರೊಕೊಡೈಲ್​ ತುಂಬಾ ಫ್ರೆಂಡ್ಲಿ..!

ಈ ಮೊಸಳೆ ತುಂಬ ಫ್ರೆಂಡ್ಲಿಯಿಂದ ಇತ್ತಂತೆ. ಆ ಊರಿನ ಮಕ್ಕಳು ಆ ಗಂಗರಂಯಿದ್ದ ಕೆರೆಗೆ ಮಕ್ಕಳು ಧುಮುಕಿ ಆರಾಮಾಗಿ ಈಜಬಹುದಿತ್ತಂತೆ. ಯಾಕಂದ್ರೆ ಅದು ಯಾರಿಗೂ ಹಿಂಸೆ ಕೊಡ್ತಿರಲಿಲ್ವಂತೆ. ಇದೀಗ ಈ ಮೊಸಳೆಯನ್ನ ಕಳೆದುಕೊಂಡ ಆ ಊರಿನ ಜನ ದುಃಖದ ಮಡುವಿನಲ್ಲಿದ್ದಾರೆ. ಅಲ್ಲದೇ, ಈ ಪ್ರಾಣಿಯನ್ನು ನೋಡಲು 500 ಜನ ಬಂದಿದ್ರು. ಇದರಲ್ಲೇ ತಿಳಿಯುತ್ತೆ, ಈ ಪ್ರಾಣಿ ಎಷ್ಟು ಫ್ರೆಂಡ್ಲಿಯಿತ್ತು ಅಂತಾ.