ಎಂಟನೇ ಮಹಡಿಯಿಂದ ಬಿದ್ದು ಮಗು ಸಾವು

ಮಂಗಳೂರು: ಮಗುವೊಂದು ಸ್ಲೈಡರ್ ಕಿಟಕಿಯಿಂದ ಕೆಳಗೆ ಇಣುಕಿ ನೋಡಲು ಹೋಗಿ ಆಯತಪ್ಪಿ 8ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದೆ. ಮಂಗಳೂರಿನ ಶಕ್ತಿನಗರದಲ್ಲಿ ವಾಸವಿದ್ದ ವಿಲ್ಸನ್ ಹಾಗೂ ಅಲಿತಾ ದಂಪತಿಯ ಮಗು ಶಾನಲ್ ಜೆನೀಶಿಯಾ ಡಿಸೋಜಾ (5) ಮೃತ ಬಾಲಕಿ. ಬಾಲಕಿಯಿರುವ ಮನೆಯ ಕಿಟಕಿಗೆ ಮುಂಜಾಗ್ರತಾ ಕ್ರಮವಾಗಿ ರಾಡ್ ಅಳವಡಿಸದೇ ಇರೋದ್ರಿಂದ ಅನಾಹುತ ಸಂಭವಿಸಿದೆ. ಘಟನೆ ಸಂಬಂಧಿಸಿದಂತೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv