ಕ್ಲಿಯರ್ ಅಂಡ್​ ಗ್ಲೋಯಿಂಗ್‌ ಸ್ಕಿನ್‌ ನಿಮ್ಮದಾಗಬೇಕಾ? ಆಲಿವ್ ಎಣ್ಣೆ ಉಪಯೋಗಿಸಿ!

ಮುಖದ ಚರ್ಮ ಕಾಂತಿ ಪಡೆಯಲು ಮಾರ್ಕೆಟ್‌ನಲ್ಲಿ ಸಿಗುವ ಉತ್ಪನ್ನಗಳಿಗೆ  ಹಣ ವೆಚ್ಚ ಮಾಡುತ್ತೇವೆ. ಆದ್ರೆ ಮಾರ್ಕೆಟ್‌ನಲ್ಲಿ ಸಿಗುವ ಉತ್ಪನ್ನಗಳಲ್ಲಿ ರಾಸಾಯನಿಕ ಅಧಿಕವಾಗಿದ್ದು, ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಅದಕ್ಕಾಗಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಪಾಡಲು ಆಲಿವ್ ಎಣ್ಣೆ ಉಪಯೋಗಿಸಬಹುದು. ಆಲಿವ್ ಎಣ್ಣೆ ಆರೋಗ್ಯ ಹಾಗೂ ಸೌಂದರ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತ. ಇದರಲ್ಲಿ ಪೌಷ್ಠಿಕಾಂಶ ಅಧಿಕವಾಗಿದ್ದು, ಚರ್ಮದ ಕಾಂತಿ ಹೆಚ್ಚಿಸುತ್ತೆ. ಚರ್ಮ ತಜ್ಞರ ಪ್ರಕಾರ, ಆಲಿವ್ ಎಣ್ಣೆ ಇತರ ಪದಾರ್ಥಗಳ ಜತೆಗೆ ಬೆರಸಿ ಉಪಯೋಗಿಸಿದರೆ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.

ಆಲಿವ್ ಎಣ್ಣೆ ಉಪಯೋಗಿಸುವುದು ಹೇಗೆ ?

ಆಲಿವ್ ಎಣ್ಣೆ ಮತ್ತು ನಿಂಬೆಹಣ್ಣು: ಆಲಿವ್ ಎಣ್ಣೆ ಒಂದು ಅದ್ಭುತ ಮಾಯ್ಚರೈಸರ್ ಆಗಿದೆ. ಇದರಲ್ಲಿ ಫ್ಯಾಟಿ ಆ್ಯಸಿಡ್ ಗಳಿದ್ದು, ಚರ್ಮದ ಮೃದುತ್ವವನ್ನು ಹೆಚ್ಚಿಸುತ್ತದೆ. ಇದು ವಯಸ್ಸನನ್ನು ಮರೆಮಾಚುತ್ತದೆ. 1 ಟೇಬಲ್ ಸ್ಪೂನ್ ನಿಂಬೆರಸ, 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ ಹಾಕಿ ಮಿಶ್ರಣ ಮಾಡಿ, ಇದನ್ನು 5 ನಿಮಿಷಗಳ ಕಾಲ ಇಡಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, 3-4 ನಿಮಿಷದವರೆಗೂ ಮಸಾಜ್ ಮಾಡಿ. 30 ನಿಮಿಷ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.

ಆಲಿವ್ ಎಣ್ಣೆ- ಜೇನುತುಪ್ಪ
ಆಲಿವ್ ಆಯಿಲ್ ನೈಸರ್ಗಿಕ ಎಣ್ಣೆ. ಇದು ಅಗತ್ಯವಾದ ಕೊಬ್ಬಿನ ಅಂಶವನ್ನು ಹೊಂದಿರುತ್ತದೆ. ಡ್ರೈ​ ಚರ್ಮ ಇದ್ದವರು ಆಯಿಲ್ ಎಣ್ಣೆ ಉಪಯೋಗಿಸಬಹುದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುವುದರಿಂದ ಚರ್ಮದ ಸುಕ್ಕನ್ನು ತಡೆಗಟ್ಟುತ್ತದೆ. ಅಲ್ಲದೇ ಮೊಡವೆ ಕಲೆಗಳಿಗೂ ಇದು ಸಹಾಯಕಾರಿ.

1 ಚಮಚ ಆಲಿವ್ ಎಣ್ಣೆ, ಜೇನುತುಪ್ಪ, ಮೊಟ್ಟೆಯ ಹಳದಿ ಲೋಳೆ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಫೇಸ್ ಹಾಗೂ ನೆಕ್‌ಗೆ ಹಚ್ಚಿ, 10 ನಿಮಿಷಗಳ ಕಾಲ ಬಿಟ್ಟು. ಬೀಸಿ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಚರ್ಮದ ಮೃದುತ್ವ, ನೈಸರ್ಗಿಕ ಹೊಳಪನ್ನು ಪಡೆದುಕೊಳ್ಳಬಹುದು.

ಆಲಿವ್ ಎಣ್ಣೆ- ಅರಿಶಿಣ
ಇದಕ್ಕಾಗಿ ನೀವು 1 ಚಮಚ ಆಲಿವ್ ಎಣ್ಣೆ, 1/2 ಸ್ಪೂನ್ ಅರಿಶಿಣ ಪುಡಿ, ಮತ್ತು 2 ಟೇಬಲ್ ಸ್ಪೂನ್ ಮೊಸರು ಮಿಶ್ರಣ ಮಾಡಿ, ಈ ಫೇಸ್‌ ಪ್ಯಾಕ್‌ನ್ನು ನಿಮ್ಮ ಮುಖಕ್ಕೆ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ, 15 ನಿಮಿಷ ಬಿಟ್ಟು, ಬೆಚ್ಚಗಿನ ನೀರಲ್ಲಿ ಮುಖ ತೊಳೆಯಿರಿ. ಇದರಿಂದ ಒಣಗಿದ ಚರ್ಮ ಕಾಂತಿಯುತವಾಗುವುದಲ್ಲದೇ, ಚರ್ಮ ಬಿರುಕಾಗುವುದನ್ನು ತಡೆಗಟ್ಟುತ್ತದೆ.

ಆಲಿವ್ ಆಯಿಲ್-ಕ್ಯಾಸ್ಟರ್ ಎಣ್ಣೆ
1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ, 1 ಟೀಬಲ್ ಸ್ಪೂನ್ ಕ್ಯಾಸ್ಟರ್ ಆಯಿಲ್ ಮತ್ತು ಟೀ ಟ್ರಿ ಆಯಿಲ್ ಮಿಕ್ಸ್ ಮಾಡಿ, ಮುಖಕ್ಕೆ ಹಚ್ಚಿ 2-3 ನಿಮಿಷದವೆರಗೂ ನಿಧಾನವಾಗಿ ಮಸಾಜ್ ಮಾಡಿ. 5 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಚರ್ಮವು ಮೃದುವಾಗುವುದಲ್ಲದೇ, ಮುಖ ಹೊಳೆಯುತ್ತದೆ.


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv