ಐವರು ಪೊಲೀಸರು ತುಂಗಭದ್ರಾದಲ್ಲಿ ಕೊಚ್ಚಿಹೋಗಬೇಕಿತ್ತು, ಆದ್ರೆ..!?

ಬಳ್ಳಾರಿ: ಹಂಪಿಯ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನೀರುಪಾಲಾಗುತ್ತಿದ್ದ ಮಹಾರಾಷ್ಟ್ರ ಮೂಲದ ಐವರು ಪೊಲೀಸರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮಹಾರಾಷ್ಟ್ರ ಮೂಲದ ಐವರು ಪೊಲೀಸರು ಹಂಪಿಯ ವಿರೂಪಾಕ್ಷ ದೇವರ ದರ್ಶನಕ್ಕೆ ಆಗಮಿಸಿದ್ದರು.
ಬೋಟ್​ ಚಾಲಕರ ಸಮಯಪ್ರಜ್ಞೆ, ತಪ್ಪಿದ ಭಾರೀ ಅನಾಹುತ
ಈ ವೇಳೆ ತುಂಗಭದ್ರಾ ನದಿಗೆ ಈಜಲು ತೆರಳಿದ್ದರು. ಈಜಲು ಹೋಗಿ ನೀರು ಪಾಲಾಗುತ್ತಿದ್ದರು. ಈ ವೇಳೆ ಎಚ್ಚೆತ್ತ ಸ್ಥಳೀಯ ಬೋಟ್ ಚಾಲಕರು ಪೊಲೀಸರನ್ನು ರಕ್ಷಿಸಿದ್ದಾರೆ. ಸದ್ಯ ಸ್ಥಳೀಯ ಬೋಟ್​ ಚಾಲಕರ ಸಮಯಪ್ರಜ್ಞೆಯಿಂದ ಸಂಭವಿಸುತ್ತಿದ್ದ ದೊಡ್ಡ ಅನಾಹುತವೇ ತಪ್ಪಿದೆ ಎನ್ನಬಹುದು. ಹಂಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv