ಟಂಟಂ ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೆ ಐವರ ಸಾವು

ವಿಜಯಪುರ: ರಾಷ್ಟ್ರೀಯ ಹೆದ್ದಾರಿ 12ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಾಲೂಕಿನ ಬರಟಗಿ ತಾಂಡಾ ಬಳಿ ಟಂಟಂ ಆಟೋಗೆ ಲಾರಿ ಗುದ್ದಿದ ರಭಸಕ್ಕೆ ಟಂಟಂನಲ್ಲಿದ್ದ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಟಂಟಂ ಚಾಲಕ ಸೇರಿದಂತೆ ಐದು ಜನ ಸಾವನ್ನಪ್ಪಿದ್ದಾರೆ.

ಅಪಘಾತದಿಂದಾಗಿ ಟಂಟಂ ರೋಡಿನ‌ ಮೇಲೆಯ ಪಲ್ಟಿಯಾಗಿ‌ ಬಿದ್ದಿದ್ರಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಡೋಣೂರ ಅರವಿಂದ ಅಗಸರ (32) ಮೃತ ಚಾಲಕ. ಮೃತರೆಲ್ಲರೂ ಡೋಣುರ ಗ್ರಾಮದವರು. ಡೋಣುರ ಗ್ರಾಮದಿಂದ ತಿಡಗುಂದಿ ಕಡೆಗೆ ಹೊರಟಿದ್ದ ವೇಳೆ ದುರಂತ ಸಂಭವಿಸಿದೆ. ಘಟನೆ ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv