ಗಿಡಮೂಲಿಕೆಗಳಿಂದ ಜೀರ್ಣಶಕ್ತಿಯನ್ನ ಹೇಗೆ ಹೆಚ್ಚಿಸಿಕೊಳ್ಳಹುದು..?

ಇಂದಿನ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆಯ ಕೊರತೆ, ಸರಿಯಾಗಿ ನಿದ್ರೆ ಮಾಡದಿರುವುದು ಮತ್ತು ಅನ್​ಹೆಲ್ದಿ ಆಹಾರಗಳ ಸೇವನೆ, ಸಂಸ್ಕರಿಸಿದ ಆಹಾರ, ಅತಿಯಾಗಿ ಜಂಕ್ ಫುಡ್​ಗಳನ್ನ ತಿನ್ನುವುದು ಇನ್ನು ಹಲವಾರು ಕಾರಣಗಳಿಂದ ನಮ್ಮ ಆರೋಗ್ಯದಲ್ಲಿ ಏರುಪೇರುಗಳಾಗುತ್ತದೆ. ಹೆಚ್ಚು ತಿನ್ನುವುದು ಅಥವಾ ತೀರಾ ಕಡಿಮೆ, ಧೂಮಪಾನ, ಮದ್ಯಪಾನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾದ ಇತರ ಅಂಶಗಳಾಗಿವೆ. ಅಷ್ಟೇ ಅಲ್ಲ ಕೆಲಸದಲ್ಲಿ ಸ್ಟ್ರೆಸ್​, ಪ್ರೆಶರ್​ ಹೆಚ್ಚಾಗಿದ್ರೂ ಕೂಡಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಈ ಒತ್ತಡ ತುಂಬಿದ ಜೀವನ ಶೈಲಿಯು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೋ ಅದೇ ರೀತಿ ನಮ್ಮ ಜೀರ್ಣಾಂಗದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಆಹಾರ ಪದ್ದತಿಗಳು ಜೀರ್ಣಕ್ರಿಯೆ ಸಾಮಾರ್ಥ್ಯ ಕಡಿಮೆಯಾಗುವಂತೆ ಮಾಡುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬುವುದು, ಗ್ಯಾಸ್​ನಂತಹ ಸಮಸ್ಯೆಗಳು ಆರಂಭವಾಗುತ್ತದೆ.

ಒಂದು ವೇಳೆ ನಿಮಗೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆಯಿದೆ ಎಂದಾದರೆ ಈ ಕೆಳಗಿನ 5 ಗಿಡಮೂಲಿಕೆಗಳನ್ನ ಬಳಸೋದ್ರಿಂದ ಜೀರ್ಣಕ್ರಿಯೆಯನ್ನ ಉತ್ತಮಪಡಿಸಿಕೊಳ್ಳಬಹುದು.

1. ಹಸಿ ಶುಂಠಿ
ಶುಂಠಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ. ಆಯುರ್ವೇದಲ್ಲಿ ಕಫ, ಕೆಮ್ಮುಗಳಂತಹ ಖಾಯಿಲೆಗಳಿಗೆ ಮದ್ದುಗಳನ್ನ ತಯಾರಿಸುವಾಗ ಶುಂಠಿಯ ಅಂಶ ಇದ್ದೇ ಇರುತ್ತದೆ. ಶುಂಠಿ ಕಟುವಾದ ವಾಸನೆಯನ್ನು ಹೊಂದಿದ್ದು, ಇದನ್ನ ಸೇವಿಸಿದಾಗ ಸ್ವಲ್ಪ ಖಾರ ಎನಿಸುತ್ತದೆ.  ಶುಂಠಿ ಅಜೀರ್ಣಕ್ಕೆ ರಾಮಬಾಣ. ಜೀರ್ಣಕ್ರಿಯೆಯನ್ನು ಸುಧಾರಿಸುವ ಗ್ಯಾಸ್ಟ್ರಿಕ್ ಆಮ್ಲಗಳು ಮತ್ತು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯಿಂದ ಗ್ಯಾಸ್​ ಅನ್ನ ಹೊರಹಾಕುವಲ್ಲಿ ಶುಂಠಿ ಸಹಾಯ ಮಾಡುತ್ತದೆ.

2. ಕಪ್ಪು ಮೆಣಸು:
ಅಡಿಗೆಗೆ ಫ್ಲೇವರ್​ ಮತ್ತು ಸುವಾಸನೆ ನೀಡುವ ಕಪ್ಪು ಮೆಣಸು ಸಾಮಾನ್ಯವಾಗಿ ನಾವು ಅಡಿಗೆಯಲ್ಲಿ ಬಳಸುತ್ತೇವೆ. ಇದರಲ್ಲಿ ಪೈಪರಿನ್ ಎಂಬ ಸಂಯುಕ್ತವು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನ ಹೆಚ್ಚಿಸುತ್ತದೆ. ಕರಿಮೆಣಸು ಪಿತ್ತರಸ ಆಮ್ಲದ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ.

3. ತ್ರಿಫಲ:
ಮೂರು ಗಿಡಮೂಲಿಕೆಗಳ ಹಣ್ಣುಗಳ ಪರಿಣಾಮಕಾರಿ ಆಯುರ್ವೇದ ಮಿಶ್ರಣವೇ ತ್ರಿಫಲ. ಆಮ್ಲಾ (ಗೂಸ್ಬೆರ್ರಿ), ಹ್ಯಾರಿಟಾಕಿ (ಚ್ಯೂಬಿಕ್ ಮೈರೊಬಾಲ್ನ್), ಬೈಬಿಟಕಿ (ಬೆಲ್ಲರಿಕ್ ಮೈರೊಬಾಲ್ನ್), ಟ್ರೈಫಲಾ ಅದರ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಇದು ಜೀರ್ಣಕಾರಿ ವ್ಯವಸ್ಥೆಯಲ್ಲಿ ಗ್ಯಾಸ್​ಸಂಗ್ರಹಣೆಯನ್ನು ತಡೆಯುತ್ತದೆ. ಜೀರ್ಣಾಂಗದ ಸ್ನಾಯುಗಳ ಚಲನೆಯನ್ನ ಸುಧಾರಿಸುತ್ತದೆ ಮತ್ತು ಆಹಾರ ಚಲನೆಗೂ ಇದು  ಸಹಾಯ ಮಾಡುತ್ತದೆ. ಅಜೀರ್ಣವನ್ನು ಗುಣಪಡಿಸಲು ಟ್ರಿಫಲಾ ಸಹಾಯ ಮಾಡುತ್ತದೆ.

4. ಸೋಂಪು
ಸಾಮಾನ್ಯವಾಗಿ ಮೌತ್​ ಫ್ರಷ್​ನರ್ ಆಗಿ ಸೋಂಪು ಕಾಳನ್ನ ಬಳಸಲಾಗುತ್ತದೆ. ಸೋಂಪು ಬೀಜಗಳು ಜೀರ್ಣಕಾರಿ ವ್ಯವಸ್ಥೆಯನ್ನ ಉತ್ತಮಪಡಿಸುವ ಔಷಧೀಯ ಗುಣಗಳನ್ನು ಹೊಂದಿವೆ. ಇದು ಕರುಳಿನ ಸ್ನಾಯುಗಳನ್ನು ಸಡಿಲಿಸುವಲ್ಲಿ ಸಹಾಯ ಮಾಡುವ ಆಂಟಿಸ್ಪಾಸ್ಮೊಡಿಕ್ ಕ್ರಿಯೆಯನ್ನು ಹೊಂದಿದೆ.

5. ಶಂಖ ಭಸ್ಮ:
ಶಂಖದಿಂದ ತಯಾರಿಸಿದ ಶಂಕ ಭಸ್ಮವು ಹಸಿವು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೇ ಜೀರ್ಣಕ್ರಿಯೆಯನ್ನ ಉತ್ತಮಗೊಳಿಸಿ ರಿಲೀಫ್​ ಗ್ಯಾಸ್​ ಪ್ರಾಬ್ಲಂ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ವಿಶೇಷ ಬರಹ: ಶ್ರುತಿ. ಆರ್​