ನಾಪತ್ತೆಯಾದ ಜೆಡಿಎಸ್​​ ಮುಖಂಡರಲ್ಲಿ ಐವರು ಸಾವನ್ನಪ್ಪಿರುವ ಶಂಕೆ

ಬೆಂಗಳೂರು: ಶ್ರೀಲಂಕಾ ಪ್ರವಾಸಕ್ಕೆ ತೆರಳಿ ನಾಪತ್ತೆಯಾಗಿರೋ 7 ಮಂದಿ ಜೆಡಿಎಸ್​ ಮುಖಂಡರ ಪೈಕಿ ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗ್ತಿದೆ. ಟಿ. ದಾಸರಹಳ್ಳಿಯ ಜೆಡಿಎಸ್​ ಮುಖಂಡ ಕೆಜಿ ಹನುಮಂತರಾಯಪ್ಪ ಹಾಗೂ ರಂಗಪ್ಪ ಸಾವನ್ನಪ್ಪಿರುವುದಾಗಿ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ. ಈ ಬಗ್ಗೆ ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡರು ಕೂಡ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ. ಇನ್ನುಳಿದವರ ಸಾವಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಜೆಡಿಎಸ್​ ಮುಖಂಡರು ನಾಪತ್ತೆಯಾಗಿರೋ ಹಿನ್ನೆಲೆ ಸಿಎಂ ಹೆಚ್​ಡಿ ಕುಮಾರಸ್ವಾಮಿ ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಕಚೇರಿ ಜೊತೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.

ನೆಲಮಂಗಲ, ತುಮಕೂರು ಹಾಗೂ ಬೆಂಗಳೂರು ಉತ್ತರ ತಾಲೂಕಿನ ಏಳು ಜನ ಜೆಡಿಎಸ್‌ ಮುಖಂಡರು ಎರಡು ದಿನಗಳ ಹಿಂದೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ಇವರೆಲ್ಲಾ ಈಗ ಸಂಪರ್ಕಕ್ಕೆ ಸಿಗದಿರುವುದು ಆತಂಕಕ್ಕೆ ಕಾರಣವಾಗಿದೆ. ಶಿವಣ್ಣ, ಮುನಿಯಪ್ಪ, ಲಕ್ಷ್ಮೀ ನಾರಾಯಣ, ಹನುಮಂತರಾಯಪ್ಪ, ರಮೇಶ್, ಮಾರೇಗೌಡ ಹಾಗೂ ಪುಟ್ಟರಾಜು ಸಂಪರ್ಕಕ್ಕೆ ಸಿಗದ ಮುಖಂಡರು. ಏ.20ರಂದು ಶ್ರೀಲಂಕಾಗೆ ತೆರಳಿದ್ದ ಇವರು ಶಾಂಗ್ರಿಲಾ‌ ಹೋಟೆಲ್​​ನಲ್ಲಿ ತಂಗಿದ್ದರು. ಆದ್ರೆ ನಿನ್ನೆ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕ ಮುಖಂಡರು ಸಂಪರ್ಕಕ್ಕೆ ಸಿಗದಿರುವ ಹಿನ್ನೆಲೆ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv