ಸಮ್ಮಿಶ್ರ ಬಜೆಟ್​ನಲ್ಲಿ ಘೋಷಣೆಯಾದ 4 ಹೊಸ ತಾಲೂಕುಗಳು ಇವೇ!

ಬೆಂಗಳೂರು: 2019-20ನೇ ಸಾಲಿನ ಮೈತ್ರಿ ಸರ್ಕಾರದ ಸುದೀರ್ಘ ಬಜೆಟ್​ ಮಂಡನೆ ಮಾಡಿದ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ನಾಲ್ಕು ಹೊಸ ತಾಲೂಕುಗಳನ್ನ ಘೋಷಣೆ ಮಾಡಿದ್ದಾರೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು, ಬಾಗಲಕೋಟೆಯ ತೇರದಾಳ, ಚಿಕ್ಕಮಗಳೂರು ಜಿಲ್ಲೆಯ ಕಳಸ ಅನ್ನು ಹೊಸ ತಾಲೂಕುಗಳಾಗಿ ಘೋಷಣೆ ಮಾಡಿದ್ದಾರೆ. 3 ಗಂಟೆ 5 ನಿಮಿಷಗಳ ₹2 ಲಕ್ಷದ 36 ಸಾವಿರ ಕೋಟಿಯ ಭಾರೀ ಪ್ರಮಾಣದ ಬಜೆಟ್​ನಲ್ಲಿ ನಾಲ್ಕು ಹೊಸ ತಾಲೂಕುಗಳನ್ನ ಘೋಷಣೆ ಮಾಡಲಾಗಿದೆ.