ದೇಹದ ಬೊಜ್ಜು ಕರಗಿಸಲು 4 ಪ್ರೋಟೀನ್ ಶೇಕ್‌..!

ದೇಹದ ಬೊಜ್ಜು ಕರಗಿಸಲು ಬಹಳಷ್ಟು ಮಂದಿ ಫಿಟ್ನೆಸ್ ಕಡೆ ಗಮನ ಕೊಡುತ್ತಾರೆ. ಜಿಮ್‌ಗೆ ಹೋಗಿ ವರ್ಕೌಟ್ ಮಾಡುವವರ ಸಂಖ್ಯೆ ಹೆಚ್ಚಿದೆ. ಮಸಲ್ಸ್‌ ಬಲಪಡಿಸುವುದು ಹಾಗೂ ಹೆಚ್ಚಿನ ಫ್ಯಾಟ್ ಕಳೆದುಕೊಳ್ಳುವುದು ತುಂಬಾ ಜನರ ಗುರಿಯಾಗಿರುತ್ತದೆ. ಆದ್ರೆ, ಆರೋಗ್ಯಕರ ತಾಲೀಮಿನ ಜತೆಗೆ ಪ್ರೋಟೀನ್ ಸಮೃದ್ಧವಿರುವ ಆಹಾರವು ಅಷ್ಟೇ ಮುಖ್ಯ ಆಗುತ್ತೆ ಅಂತಾ ತುಂಬಾ ಜನರಿಗೆ ಗೊತ್ತೇ ಇರಲ್ಲ. ಮಾರ್ಕೆಟ್‌ನಲ್ಲಿ ಸೀಗುವ ಪ್ರೋಟೀನ್ ಪಾನೀಯಗಳನ್ನು ಸೇವಿಸುತ್ತಾರೆ. ಆದ್ರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮ್ಮ ದೇಹದ ಬೊಜ್ಜು ಕರಗಿಸಲು ಈ 4 ಪ್ರೋಟೀನ್ ಶೇಕ್‌ಗಳು ಹೆಚ್ಚು ಉಪಯುಕ್ತ ಎಂದು ಹೇಳಲಾಗುತ್ತದೆ. ಫಿಟ್ನೆಸ್‌ ಕಾಳಜಿ ಇರುವವರು ಮನೆಯಲ್ಲೇ ಪ್ರೋಟೀನ್‌ ಶೇಕ್‌ಗಳನ್ನು ತಯಾರಿಸಿ ಸವಿಯಬಹುದು.

1 ತೆಂಗಿನಕಾಯಿ-ಬಾದಾಮಿ ಪ್ರೋಟೀನ್ ಶೇಕ್
ಪ್ರೋಟೀನ್‌ಗಳ ಮೂಲ ಬಾದಾಮಿಯಲ್ಲಿದೆ. ಬಾದಾಮಿಯಲ್ಲಿ ಅಧಿಕ ಪ್ರೋಟೀನ್ ಅಡಗಿರುತ್ತದೆ. ತೆಂಗಿನ ಹಾಲಿನಲ್ಲಿ ಪೋಟ್ಯಾಶಿಯಂ ಅಂಶ ಅಧಿಕವಾಗಿದೆ, ಹಾಲಿನ ಸೇವನೆಯಿಂದ ಮೂಳೆ ಬಲಗೊಳ್ಳುತ್ತದೆ. ಸ್ನಾಯು, ನರಗಳಿಗೆ ಪ್ರಯೋಜನಕಾರಿ, ಇನ್ನೂ ತೆಂಗಿನ ಹಾಲಿನಲ್ಲಿ ಮ್ಯಾಗ್ನೇಶಿಯಂ ಅಂಶ ಹೆಚ್ಚಿದ್ದು, ಸಮತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆರೋಗ್ಯಕ್ಕೆ ಉತ್ತಮವಾದ್ದದ್ದು. ಫಿಟ್ನೆಸ್‌ಗೆ ಗಮನ ಕೊಡುವವರು, ತೂಕ ನಷ್ಟ ಗಮನ ಕೊಡುವವರು ಬಾದಾಮಿ ಹಾಲು ಹಾಗೂ ತೆಂಗಿನಕಾಯಿ ಪ್ರೋಟೀನ್ ಶೇಕ್ ಮನೆಯಲ್ಲೇ ತಯಾರಿಸಿ, ಸವಿಯಬಹುದು.

2. ಬ್ಲ್ಯೂಬೆರ್ರಿ ಪ್ರೋಟೀನ್ ಶೇಕ್
ಬೆರ್ರಿ ಹಣ್ಣಿನಲ್ಲಿ ಶಕ್ತಿಯುತ ಉತ್ಕರ್ಷಣ ನಿರೋಧಕಗಳಿವೆ. ತೂಕ ಇಳಿಸಲು ಸಹಾಯ ಮಾಡುತ್ತದೆ. ಬ್ಲ್ಯೂವೆರಿ ಹಣ್ಣಿನಲ್ಲಿ ವಿಟಮಿನ್ ಸಿ, ನಾರು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ಪ್ರೋಟೀನ್ ಶೇಕ್‌ಗೆ ವಿವಿಧ ಹಣ್ಣುಗಳನ್ನು ಬೆರೆಸಿ ಸೇವಿಸಬಹುದು. ಹೆಚ್ಚು ತೂಕ ಇಳಿಸುವಲ್ಲಿ ಇದು ಸಹಾಯಕಾರಿಯಾಗಿದೆ. ಬಾದಾಮಿ ಹಾಲು ಹಾಗೂ ಚಿಯಾ ಬೀಜಗಳು ಉತ್ತಮ ಪ್ರೋಟೀನ್ ಅಂಶ ಹೊಂದಿದೆ. ಇವೆರೆಡರ ಮಿಶ್ರಣದಿಂದ ಈ ನ್ಯಾಚ್ಯುರಲ್ ಪ್ರೋಟೀನ್ ಶೇಕ್ ತಯಾರಿಸಿ, ಬ್ಲೂಬೆರ್ರಿ ಪ್ರೋಟೀನ್ ಶೇಕ್ ಸೇವಿಸಬಹುದು.

3.ಸೋಯಾ ಮಿಲ್ಕ್,-ಸ್ಟ್ರಾಬೆರ್ರಿ ಪ್ರೋಟೀನ್ ಶೇಕ್
ಸೋಯಾ ಮಿಲ್ಕ್‌ನಲ್ಲಿ ಕಡಿಮೆ ಕೊಬ್ಬಿನಂಶ ಇರುವುದರಿಂದ ಅದು ದೇಹದ ಬೊಜ್ಜು ತೊಡೆದುಬಾಕಲು ಸಹಾಯ ಮಾಡುತ್ತದೆ. ಮಸಲ್ಸ್‌ಗೂ ಸೋಯಾ ಮಿಲ್ಕ್ ಒಳ್ಳೆಯದು,ಪೋಸ್ಟ್ ವರ್ಕೌಟ್‌ ಇದು ಉತ್ತಮ ಪಾನೀಯ ಎಂದು ಹೇಳಲಾಗುತ್ತದೆ. ಸೋಯಾ ಸ್ಟ್ರಾಬೆರ್ರಿ ಪಾನೀಯ ಬೊಜ್ಜು ನಿವಾರಿಸಲು ಸಹಾಯ ಮಾಡುತ್ತದೆ.

4.ಬೆರ್ರಿ ಶೇಕ್
ಬೆರ್ರಿ ಹಣ್ಣುಗಳು ದೇಹದ ಆರೋಗ್ಯಕ್ಕೆ  ಪ್ರೋಟೀನ್ ಒದಗಿಸುತ್ತವೆ ಎಂದು ಇತ್ತೀಚೆಗೆ ನಡೆಸಿದ ಅಧ್ಯಯನಗಳು ಹೇಳಿವೆ. ದೇಹದ ತೂಕ ಇಳಿಸಲು ಹಾಗೂ ನಿಮ್ಮ ಡಯಟ್‌ನಲ್ಲಿ ಬೆರ್ರಿ ಶೇಕ್‌ನ್ನು ಸೇರಿಸಿಕೊಳ್ಳಬಹುದು. ಇದರಲ್ಲಿ ಅಧಿಕ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿವೆ. ಈ 4 ನ್ಯಾಚುರಲ್ ಪ್ರೋಟೀನ್‌ ಶೇಕ್‌ಗಳನ್ನು ಮನೆಯಲ್ಲೇ ತಯಾರಿಸಿ, ಸೇವಿಸಬಹುದು. ಇದ್ರಿಂದ ಅಧಿಕ ತೂಕವನ್ನು ಕಳೆದುಕೊಳ್ಳಬಹುದು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv