ಅಜೀರ್ಣ ಸಮಸ್ಯೆನಾ? ಈ ಮನೆ ಮದ್ದು ಟ್ರೈ ಮಾಡಿ!

ಮಾರ್ಡನ್ ಲೈಫ್, ಜಂಕ್​​ ಫುಡ್​ ತಿನ್ನೋದು, ಉತ್ತಮ ಆಹಾರದ ಬಗ್ಗೆ ಗಮನ ಕೊಡದಿರೋದ್ರಿಂದ ಅಜೀರ್ಣ ಹೆಚ್ಚಾಗುತ್ತದೆ. ಅಜೀರ್ಣತೆಯಿಂದ ತೂಕ ಹೆಚ್ಚಾಗುವಿಕೆಗೂ ಕಾರಣವಾಗಬಹುದು. ಹೊರಗಡೆ ಜಾರ್ಣಕ್ರಿಯೆಗೆ ಔಷಧಿಗಳು ಸಿಕ್ಕರೂ, ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಾದ ಸಾಂಬಾರ ಪದಾರ್ಥಗಳೇ ಹೆಚ್ಚು ಉಪಯೋಗಕಾರಿ. ಜೀರ್ಣಕ್ರಿಯೆ ಗಂಭೀರ ಸಮಸ್ಯೆಯಲ್ಲ. ಆದ್ರೆ ಇದು ದೀರ್ಘ ಸಮಯದವರೆಗೆ ಕಂಡು ಬಂದರೆ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಈ ನಾಲ್ಕು ಸಾಂಬಾರ ಪದಾರ್ಥಗಳು ಜೀರ್ಣಕ್ರಿಯೆ ಸಮಸ್ಯೆ ನಿವಾರಿಸಬಲ್ಲವು.

1. ಶುಂಠಿ: ಭಾರತದಲ್ಲಿ ಹೆಚ್ಚಾಗಿ ಬಳಸಲ್ಪಡುವ ಸಾಂಬಾರ ಪದಾರ್ಥ ಶುಂಠಿ. ಶುಂಠಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತೆ. ಇದು ಒಂದು ಉಷ್ಣಕಾರಿ ಹಾಗೂ ಸುವಾಸನೆಯುಳ್ಳ ಸಾಂಬಾರ ಪದಾರ್ಥ. ಶುಂಠಿ ಚಹಾ ಸೇವನೆಯಿಂದ ಶೀತ, ಕೆಮ್ಮು, ಗಂಟಲು ಕೆರೆತದಂತಹ ಸಮಸ್ಯೆಗಳಿಂದ ಮುಕ್ತರಾಗಬಹುದು. ಇದು ಅಜೀರ್ಣ, ವಾಕರಿಕೆ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದಕ್ಕೆ ಹೆಚ್ಚಾಗಿ ಬಳಕೆಯಾಗುತ್ತದೆ. ಶುಂಠಿ ಕರುಳನ್ನು ರಕ್ಷಿಸುತ್ತದೆಯಲ್ಲದೇ, ಕರುಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಆಯುರ್ವೇದದ ಪ್ರಕಾರ, ಶುಂಠಿ ಜೀರ್ಣಕ್ರಿಯೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಪ್ರತಿ ಬಾರಿ ಊಟಕ್ಕೆ ಮುನ್ನ ಸ್ವಲ್ಪ ತಾಜಾ ಶುಂಠಿಯನ್ನು ತುರಿದು, ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಬೆರಿಸಿ ಕುಡಿಯಬಹುದು.

2. ಕಪ್ಪು ಮೆಣಸು: ಮೆಣಸು ನೈಸರ್ಕಿಕವಾಗಿ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕವಾಗಿ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಕಪ್ಪು ಮೆಣಸಿನಲ್ಲಿ piperine ಅಂಶವಿದ್ದು, ಇದು ಜೀರ್ಣಕ್ರಿಯೆ ಹೆಚ್ಚಲು ಸಹಾಯ ಮಾಡುತ್ತದೆ.

3. ಅಜ್ವೈನ್: ಅಜೀರ್ಣ ನಿವಾರಣೆ ಮಾಡುವಲ್ಲಿ ಅಜ್ವೈನ್ ತುಂಬಾ ಸಹಾಯಕಾರಿ. 1 ಟೇಬಲ್ ಸ್ಪೂನ್ ಜೀರಿಗೆ ಪುಡಿ, 1 ಟೇಬಲ್ ಸ್ಪೂನ್ ಅಜ್ವೈನ್ ಜೀಜ. 1/2 ಚಮಚ ಶುಂಠಿಯ ಪುಡಿಯನ್ನು ಮಿಶ್ರಣ ಮಾಡಿ, 1 ಗ್ಲಾಸ್‌ ಬಿಸಿ ನೀರಿನಲ್ಲಿ ಈ ಮಿಶ್ರಣವನ್ನು ಮಿಕ್ಸ್ ಮಾಡಿ ಕುಡಿದರೆ ಜೀರ್ಣಕ್ರಿಯೆ ಹಾಗೂ ಅಸಿಡಿಟಿ ಸಮಸ್ಯೆಗೆ ಪರಿಹಾರ ದೊರಕುತ್ತದೆ.

4. ಲವಂಗ: ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಲವಂಗವನ್ನ ಉಪಯೋಗಿಸಲಾಗುತ್ತದೆ. ಚಹಾ ತಯಾರಿಸುವಾಗ ಲವಂಗವನ್ನು ಸೇರಿಸಿ ಸೇವಿಸಬಹುದು. ಲವಂಗ ಬೆರಸಿದ ನೀರು ಸೇವನೆ ಸಹ ಹೆಚ್ಚು ಉಪಯುಕ್ತ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv