ಜೋಡಿ ಕೊಲೆ ಪ್ರಕರಣ: ಹಂತಕರು ಅಂದರ್​​, ಪೊಲೀಸರಿಗೆ ಬಹುಮಾನ

ಹುಬ್ಬಳ್ಳಿ: ಜೂನ್​ 8ರಂದು ಜೆಸಿ ನಗರದ ಅಜಂತಾ ಹೋಟಲ್​ ಬಳಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧ ನಾಲ್ವರು ಆರೋಪಿಗಳನ್ನು ಶಹರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಎಮ್. ಎನ್. ನಾಗರಾಜ, ಅಜಂತಾ ಹೋಟೆಲ್​ ಬಳಿ ರಾತ್ರಿ ವೇಳೆ ಸ್ನೇಹಿತರ ನಡುವೆ ನಡೆದ ಗಲಾಟೆಯಲ್ಲಿ ಮೊಹಮ್ಮದ್​ ಫಿರೋಜ್​ ಹನಸಿ, ರಿಯಾಮ್​ ಸವಣೂರು ಎಂಬುವವರನ್ನು ಕೊಲೆ ಮಾಡಲಾಗಿತ್ತು. ಶಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಕೊಲೆಗೆ ಸಂಬಂಧಿಸಿದ ಆರೋಪಿಗಳಾದ ಮೊಹಸೀನ್ ನವಲೂರು, ಅಖಿಲ್​ ಬೇಪಾರಿ, ಇರ್ಷಾದ್​ ಮಿಶ್ರಿಕೋಟಿ, ವೀರೇಶ್​​ ಸೊಟ್ನಾಳರನ್ನ ಬಂಧಿಸಲಾಗಿದೆ. ಅಲ್ಲದೇ ಕೊಲೆಗೆ ಬಳಸಿದ ಚಾಕು ಸೇರಿದಂತೆ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಹಳೆಯ ದ್ವೇಷ ಮತ್ತು ಹಣಕಾಸಿನ ವ್ಯವಹಾರಕ್ಕಾಗಿ ಕೊಲೆ ನಡೆದಿದೆ. ಇನ್ನು ಆರೋಪಿಗಳನ್ನು ಪತ್ತೆ ಹಚ್ಚಿದ ಶಹರ ಪೊಲೀಸರಿಗೆ ಬಹುಮಾನ ಘೋಷಿಸಲಾಗಿದೆ ಎಂದು ಪೊಲೀಸ್​ ಆಯುಕ್ತ ಎಮ್​​.ಎನ್​​. ನಾಗರಾಜ ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv