ಅಕ್ರಮವಾಗಿ ಸಾಗಿಸುತ್ತಿದ್ದ 17ಟನ್​ ಪಡಿತರ ಅಕ್ಕಿ ವಶ, 4 ಜನರ ಬಂಧನ

ದಾವಣಗೆರೆ: ಜಿಲ್ಲಾ ಡಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ 17ಟನ್ ಪಡಿತರ ಅಕ್ಕಿ, ಲಾರಿ ವಶಕ್ಕೆ ಪಡೆದು, ನಾಲ್ವರನ್ನ ಬಂಧಿಸಿದ್ದಾರೆ.
ಅಬ್ದುಲ್ ಲತೀಫ್ (64) ಇಸಾರ್ ಅಲಿ (35), ರಜಕ್ (27) ನಜೀರ್ (33) ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಮಲೇಬೆನ್ನೂರಿನಲ್ಲಿ, ಪಡಿತರ ಅಕ್ಕಿಯನ್ನ ಅಕ್ರಮವಾಗಿ ಬೇರೆ ಕಡೆ ಸಾಗಿಸಲಾಗುತ್ತಿತ್ತು. ಈ ವೇಳೆ ಡಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ಕಿಯನ್ನ ತುಂಬಿದ್ದ ಲಾರಿಯನ್ನ ವಶಪಡಿಸಿಕೊಂಡು, ಆರೋಪಿಗಳನ್ನ ಬಂಧಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv